ಜಿಲ್ಲೆ

ಶಾರೀರಿಕ ನೋವು ನಿವಾರಕ ಅಕ್ಯೂಪ್ರೆಶರ್ ಶಿಬಿರ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಮುಕುಂದ ನಗರದ ಪತಂಜಲಿ ವೆಲ್​ನೆಸ್ ಸೆಂಟರ್​ನಲ್ಲಿ ಸೆ. 21ರಿಂದ 25ರವರೆಗೆ ಶಾರೀರಿಕ ನೋವು ನಿವಾರಕ ಅಕ್ಯೂಪ್ರೆಶರ್ ವಿಶೇಷ ಶಿಬಿರ ಏರ್ಪಡಿಸಲಾಗಿದೆ.

ಪ್ರಖ್ಯಾತ ಅಕ್ಯೂಪ್ರೆಶರ್ ತಜ್ಞ ಆರ್.ಕೆ. ಶರ್ಮಾ ನೇತೃತ್ವದಲ್ಲಿ ಮೊಣಕಾಲು ನೋವು, ಬೆನ್ನು, ಕುತ್ತಿಗೆ, ಕೀಲು, ಸಿಯಾಟಿಕ್, ಜಾಯಿಂಟ್ ಪೇನ್, ಸಂಧಿ ನೋವು, ತಲೆನೋವು ಇತ್ಯಾದಿ ಕಾಯಿಲೆಗಳಿಗೆ ಯಾವುದೇ ಔಷಧ ಇಲ್ಲದೇ ಚಿಕಿತ್ಸೆ ನೀಡಲಾಗುವುದು.

ಪತಂಜಲಿ ಯೋಗ ಪೀಠ ರಾಜ್ಯ ಪ್ರಭಾರಿ, ಯೋಗಗುರು ಭವರಲಾಲ್ ಆರ್ಯ ಅವರಿಂದ ಪ್ರತಿದಿನ ಯೋಗ ಮಾರ್ಗದರ್ಶನ ಮತ್ತು ಪತಂಜಲಿ ವೆಲ್​ನೆಸ್, ಹುಬ್ಬಳ್ಳಿಯ ಹಿರಿಯ ವೈದ್ಯರಿಂದ ಆಯುರ್ವೆದ, ಪ್ರಾಕೃತಿಕ ಚಿಕಿತ್ಸೆಯ ಮಾರ್ಗದರ್ಶನ ಸಿಗಲಿದೆ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದೆ ಎಂದು ಯೋಗಗುರು ಭವರಲಾಲ್ ಆರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.