ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಮತ್ತು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಇಂಟ್ರ್ಯಾಕ್ಟ ಕ್ಲಬ್ ವತಿಯಿಂದ ನಗರದ ಎಸ್.ಜೆ.ಆರ್.ವಿ.ಪಿ. ಮಂಡಳದ ಶಾಲೆಯಲ್ಲಿ ಇತ್ತೀಚೆಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಮಕ್ಕಳ ತಜ್ಞ ಡಾ. ಪ್ರಕಾಶ ವಾರಿ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಆರೋಗ್ಯದ ಕಡೆ ಗಮನಹರಿಸಬೇಕು. ನಾವು ಸದೃಢವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು. ಆದ್ದರಿಂದ ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ ಎಂದರು.
ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರಜ್ಞೆ ಡಾ. ಅನ್ನಪೂರ್ಣ ಸಾಂಬ್ರಾಣಿ ಮಾತನಾಡಿ, ವ್ಯಾಯಾಮ, ಪೌಷ್ಟಿಕ ಆಹಾರ ದೇಹಕ್ಕೆ ಒಳ್ಳೆಯದು ಎಂದರು.
ಪ್ರಾಚಾರ್ಯೆ ಡಾ. ಕ್ಯಾಥರಿನ್ ದಿನೇಶ ಮಾತನಾಡಿ, ಸಾರ್ಥಕ ಮತ್ತು ಯಶಸ್ವಿ ಜೀವನಕ್ಕೆ ಉತ್ತಮ ಆರೋಗ್ಯ ಮುಖ್ಯ ಎಂದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಭನಸಾಲಿ, ಡಾ. ಶಿವಾನಂದ, ಡಾ. ರವೀಂದ್ರ ವೈ., ಡಾ. ಅಸಾದುಲ್ಲಾ ಕಾರಿಗಾರ, ಶಿವಪ್ರಸಾದ ಲಕ್ಕಮನಹಳ್ಳಿ, ಅಬ್ದುಲ್ ಕಾರಿಗಾರ, ಇಂಟ್ರ್ಯಾಕ್ಟ ಕ್ಲಬ್ ಅಧ್ಯಕ್ಷ ಯುವರಾಜ ಕಥರಿ, ಕಾರ್ಯದರ್ಶಿ ಹಿಮಾಂಶಿ ಜೈನ್ ಇತರರು ಉಪಸ್ಥಿತರಿದ್ದರು.