ಜಿಲ್ಲೆ

ಕೊಳ್ಳೇಗಾಲದಲ್ಲಿ ಛಾಯಾಗ್ರಹಣ ಕಾರ್ಯಾಗಾರ

ಎ. ಆರ್. ರಘುರಾಮ

ಕೊಳ್ಳೇಗಾಲ : ತಾಲೂಕು ಛಾಯಾಗ್ರಾಹಕರ ಸಂಘದಿಂದ ಖಾಸಗಿಸಭಾಂಗದಲ್ಲಿ ಸೋಮವಾರ ಒಂದು ದಿನದ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸೋನಿ ಕಂಪನಿ ತಂತ್ರಜ್ಞ ಸತೀಶ್ ಕುಮಾರ್ ಹಾಗೂ ಮುಸ್ತಫ ಬಾಷಾ ಅವರು ಪೋಟೋ ಕ್ಯಾಮರಾ, ಅವುಗಳ ಟೆಕ್ನಾಲಜಿ, ವಿಡಿಯೋ ಕ್ಯಾಮರಾಗಳ ಕಾರ್ಯಕ್ಷಮತೆ ಮತ್ತು ಬಳಕೆ ವಿಧಾನಗಳನ್ನು ಸವಿಸ್ತರವಾಗಿ ವಿವರಿಸಿದರು.

ಚಾಮರಾಜನಗರ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಮಂಜೇಶ್, ಚಾ.ನಗರ ತಾಲೂಕು ಅಧ್ಯಕ್ಷ ಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಹನೂರು ತಾಲೂಕು ಅಧ್ಯಕ್ಷ ವೆಂಕಟಾಚಲ ಅವರಿಗೆ ಕೊಳ್ಳೇಗಾಲ ತಾಲೂಕು ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಕೊಳ್ಳೇಗಾಲ ತಾಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಸರದಾರ ಪಾಷ, ಕಾರ್ಯದರ್ಶಿ ರೋಷನ್, ನಿರ್ದೇಶಕರಾದ ನವೀನ್ ಕುಮಾರ್, ರಘುನಾಥ್, ವಸಂತ್ ಕುಮಾರ್, ಜಿ.ಆರ್.ರಘು, ರಕ್ಷಿತ್ ಮತ್ತಿತರಿದ್ದರು.