ಪಿಎಸ್‌ಎ ಬೆಳ್ಳಿ ಪದಕ ಪಡೆದುಕೊಂಡಿರುವ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ಫ್ರೆಂಡ್‌ಶಿಪ್’ ಶೀರ್ಷಿಕೆಯ ಚಿತ್ರ. ಫೋಟೋಜರ್ನಲಿಸಂ ವಿಭಾಗದಲ್ಲಿ ಪಿಎಸ್‌ಎ ಬೆಳ್ಳಿ ಪದಕ ಪಡೆದ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ದಿ ಫಿಯರ್’ ಶೀರ್ಷಿಕೆಯ ಚಿತ್ರ. ಛಾಯಾಗ್ರಾಹಕ ಪ್ರಕಾಶ ಕಂದಕೂರ. 
ಜಿಲ್ಲೆ

ಫೋಟೋಗ್ರಫಿ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರಕಾಶ ಕಂದಕೂರಗೆ ಎರಡು ಬೆಳ್ಳಿ ಪದಕ

ಕೊಪ್ಪಳ: ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ(ಪಿಎಸ್‌ಎ)ದಿಂದ ನಡೆದ 2022-23ನೇ ಸಾಲಿನ ಪಿಎಸ್‌ಎ ಇಂಟರ್‌ಕ್ಲಬ್‌ಗಳ ಅಂತಾರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾದ ಎರಡು ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯ ಮೊನೋಕ್ರೋಮ್ ವಿಭಾಗದಲ್ಲಿ ಅವರ ಜನಪ್ರಿಯ ಫ್ರೆಂಡ್‌ಶಿಪ್ ಶೀರ್ಷಿಕೆಯ ಚಿತ್ರ ಒಂದು ಪಿಎಸ್‌ಎ ಬೆಳ್ಳಿ ಪದಕ ಪಡೆದುಕೊಂಡರೆ, ಫೋಟೋ ಜರ್ನಲಿಸಂ ವಿಭಾಗದಲ್ಲಿ ಅವರ ದಿ ಫಿಯರ್ ಶೀರ್ಷಿಕೆಯ ಚಿತ್ರಕ್ಕೆ ಮತ್ತೊಂದು ಪಿಎಸ್‌ಎ ಬೆಳ್ಳಿ ಪದಕ ಲಭಿಸಿದೆ.

ಈ ಬಾರಿ ಪ್ರಪಂಚದ ವಿವಿಧ ದೇಶಗಳ ಸುಮಾರು 100 ಘಟಾನುಘಟಿ ಕ್ಲಬ್ (ಛಾಯಾಗ್ರಹಣ ಸಂಸ್ಥೆ)ಗಳು ಸ್ಪರ್ಧೆಯಲ್ಲಿದ್ದವು. ಪ್ರಕಾಶ ಕಂದಕೂರ ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.