ಜಿಲ್ಲೆ

ಫೋಟೋ, ವಿಡಿಯೋ, ರೀಲ್ಸ್ ಸ್ಪರ್ಧೆ

ಆದರ್ಶ್. ಎಂ.ಕೆ.

ಮಡಿಕೇರಿ: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪತ್ರಕರ್ತರ ಸಂಘ(ರಿ)ದ ವತಿಯಿಂದ ಪತ್ರಕರ್ತರು, ಸಾರ್ವಜನಿಕರಿಗೆ ಫೋಟೋ, ವಿಡಿಯೋ, ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತ ಶಯನ ಅವರು ತಮ್ಮ ಪುತ್ರಿ ಡಾ.ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ ಸ್ಪರ್ಧೆಗಾಗಿ ಸ್ಪರ್ಧಿಗಳು ಗರಿಷ್ಟ ೩ ಫೋಟೋಗಳನ್ನು ಕಳುಹಿಸಬಹುದು. ಪತ್ರಕರ್ತರು ಸುದ್ದಿ ಚಿತ್ರಕ್ಕೆ(ನ್ಯೂಸ್ ಫೋಟೋ) ವಿಷಯಕ್ಕೆ ಸಂಬಂಧಿಸಿದಂತೆ ಗರಿಷ್ಟ ೩ ಫೋಟೋಗಳನ್ನು ಕಳುಹಿಸಬಹುದು ಎಂದು ತಿಳಿಸಿದ್ದಾರೆ.

ಜಲಲ ಜಲಧಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ೧ ನಿಮಿಷ ಕಾಲಾವಧಿಯ ಹಿನ್ನಲೆ ಧ್ವನಿಯಿಲ್ಲದ, ಸುದ್ದಿ ಅಲ್ಲದ, ವಿಡಿಯೋಕ್ಕೆ ಆದ್ಯತೆ ನೀಡಿರುವ ೧ ವಿಡಿಯೋವನ್ನು ಕಳುಹಿಸಬಹುದು. ಸಾರ್ವಜನಿಕರು ಮಳೆಗಾಲದ ಸಂಕಷ್ಟ(ಹಾಸ್ಯವಾಗಿ) ವಿಷಯಕ್ಕೆ ಸಂಬಂಧಿಸಿದಂತೆ ೧ ನಿಮಿಷ ಕಾಲಮಿತಿಯಲ್ಲಿರುವ ಗರಿಷ್ಟ ೩ ರೀಲ್ಸ್‌ನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ.

ಎಲ್ಲಾ ವಿಭಾಗದ ಸ್ಪರ್ಧಿಗಳು ತಮ್ಮ ಫೋಟೋ, ವಿಡಿಯೋ, ರೀಲ್ಸ್‌ಗಳನ್ನು ಆ.೧೪ ರೊಳಗಾಗಿ ೯೪೪೯೨೯೦೭೧೮ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು. ಸ್ಪರ್ಧೆ ಸಂಬಂಧಿತ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ ೯೪೪೯೨೯೦೭೧೮ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.