ಜಿಲ್ಲೆ

ಶಿವಕುಮಾರ ಬನ್ನಿಹಟ್ಟಿಗೆ ಪಿಎಚ್.ಡಿ ಪ್ರದಾನ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ಪಟ್ಟಣದ ನೆಹರು ನಗರದ ನಿವಾಸಿ, ಉಪನ್ಯಾಸಕ ಶಿವಕುಮಾರ ಶೇಖಪ್ಪ ಬನ್ನಿಹಟ್ಟಿ ವಾಣಿಜ್ಯ ಶಾಸ್ತ್ರದಲ್ಲಿ ‘ಎ.ಸ್ಟಡಿ ಆನ್ ಪ್ರಾಬ್ಲೆಮ್್ಸ ಆಂಡ್ ಪ್ರಾಸ್ಟೆಕ್ಟಸ್ ಆಫ್ ವುಮೆನ್ ಎಂಪರ್ವಮೆಂಟ್ ಸ್ಕೀಮ್್ಸ ವಿತ್ ರೇಫರನ್ಸ್ ಟು ರೂರಲ್ ಆಂಡ್ ಅರ್ಬನ್ ವುಮನ್ ಇನ್ ಹಾವೇರಿ ಡಿಸ್ಟ್ರಿಕ್ಸ್’ ಎಂಬ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಈಗ ಹುಬ್ಬಳ್ಳಿಯ ಎಸ್​ಜೆಎಂವಿಎಸ್ ಕಾಲೇಜ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬ್ಯಾಡಗಿಯ ಪಪೂ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಕಡ್ಲಿಪುಡಿ ಅವರ ಮಾರ್ಗದರ್ಶನದಲ್ಲಿ ತಮಿಳುನಾಡು ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.