ಬನ್ನೂರು: ಉಪನ್ಯಾಸಕ ಡಾ.ಬಿ.ಕೆ.ಜ್ಞಾನಪ್ರಕಾಶ್ ಅವರ ಪುತ್ರಿ ಜಿ.ಪಿ.ಇಂಚರಾ ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ ಲಭಿಸಿದೆ. ಡಾ.ಜೆ.ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಗಣಕ ವಿಜ್ಞಾನ ವಿಷಯದಲ್ಲಿ ಎನರ್ಜಿ ಎಫಿಷಿಯೆನ್ಸಿ ಶೂಟಿಂಗ್ ಪ್ರೋಟೋಕಾಲ್ಸ್ ಇಂಟರ್ನೆಟ್ ಆಫ್ ಥಿಂಗ್ಸ್ ಎಂಬ ಪ್ರಬಂಧಕ್ಕೆ ಪಿಎಚ್.ಡಿ ಪದವಿ ದೊರಕಿದ್ದು, ಮುಂದಿನ ವರ್ಷದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ನಾಗರಾಜು ತಿಳಿಸಿದ್ದಾರೆ.