ಧಾರವಾಡ: ನಗರದ ವಿದ್ಯಾಗಿರಿ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕ ಸುಕುಮಾರ ಎ. ಕೊಕಟನೂರ ಅವರು `ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಆಫ್ ಲೈಮ್‌ಸ್ಟೋನ್ ಕ್ವಾ ್ಯರಿಯಿಂಗ್ ಆ್ಯಂಡ್ ಸಿಮೆಂಟ್ ಮ್ಯಾನುಫ್ಯಾಕ್ಚರಿಂಗ್: ಎ ಕೇಸ್ ಸ್ಟಡಿ ಆಫ್ ಬಾಗಲಕೋಟ ಡಿಸ್ಟಿçಕ್ಟ್, ಕರ್ನಾಟಕ ಸ್ಟೇಟ್' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ. ಅವರಿಗೆ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ವಿ.ಬಿ. ಸಾವಿರಮಠ ಮಾರ್ಗದರ್ಶಕರಾಗಿದ್ದರು.