ಜಿಲ್ಲೆ

ಭಾನುಪ್ರಕಾಶ್‌ಗೆ ಪಿಎಚ್.ಡಿ ಪದವಿ

Avinash R

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಭಾನುಪ್ರಕಾಶ್ ಬಿ.ಇ. ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಡಾ.ಎ.ಜಯಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಭಾನುಪ್ರಕಾಶ್ ಅವರು ತೆರಿಗೆದಾರರ ಹೂಡಿಕೆ ನಡವಳಿಕೆಗಳು ಎಂಬ ವಿಷಯದ ಮೇಲೆ ನಡೆಸಿದ ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಲಭಿಸಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿಯ ಮೂಲದವರಾದ ಭಾನುಪ್ರಕಾಶ್ ಹದಿನೈದು ವರ್ಷಗಳಿಂದ ಉಜಿರೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಮ್ಮ-ಈಶ್ವರ್ ದಂಪತಿ ಪುತ್ರ. ಎಸ್‌ಡಿಎಂ ತೆರಿಗೆ ಸಲಹಾ ಕೇಂದ್ರದಲ್ಲಿ ತೆರಿಗೆ ಸಲಹೆಗಾರರಾಗಿ ಹಾಗೂ ಎನ್‌ಸಿಸಿ ಆರ್ಮಿ ವಿಭಾಗದ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.