ಜಿಲ್ಲೆ

ಪಿಎಚ್​.ಡಿ ಪದವಿ ಪ್ರದಾನ

ಗೋಕಾಕ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಲಪ್ಪ ಹಂದಿಗುಂದ ಅವರು ಸಮಾಜಶಾಸ್ತ್ರ ವಿಷಯದಲ್ಲಿ ಈಚೆಗೆ ಮಂಡಿಸಿದ "ಸಸ್ಟೆನೇಬಲ್​ ಯುಥ್​ ಡೆವಲಪ್​ಮೆಂಟ್​ ಇನ್​ ಕರ್ನಾಟಕ ಎ ಸೋಶಿಯಾಲಜಿ ಸ್ಟಡಿ'' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್​.ಡಿ ಪದವಿ ಪ್ರದಾನ ಮಾಡಿದೆ. ಸಹ ಪ್ರಾಧ್ಯಾಪಕ ಡಾ.ಹನಮಗೌಡ ಸಿ. ಮಾರ್ಗದರ್ಶನ ಮಾಡಿದ್ದಾರೆ.