ಜಿಲ್ಲೆ

ಡರ್ಟಿ ಪಾಲಿಟಿಕ್ಸ್,ಪೇಸಿಎಂ ಅಭಿಯಾನಕ್ಕೆ ಕಾಂಗ್ರೆಸ್ ವಿರುದ್ಧ ಸಿಎಂ ಕೆಂಡ

Chitradurga

ಚಿತ್ರದುರ್ಗ: ಪೇಸಿಎಂ ಅಭಿಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡರ್ಟಿ ಪಾಲಿಟಿಕ್ಸ್ ಎಂದು ಜರಿದಿದ್ದಾರೆ. ಸಿರಿಗೆರೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ನೇರ ದಾಖಲೆಗಳನ್ನು ನೀಡದೆ ಕಾಂಗ್ರೆಸ್ ನಾಯಕರು ಇಂಥ ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಯಾವುದೇ ನೈತಿಕತೆ ಇಲ್ಲದೆ ನನ್ನ ಹೆಸರು ಕೆಡಿಸಲು ಕಾಂಗ್ರೆಸ್ ನಾಯಕರು ಹುನ್ನಾರು ನಡೆಸಿದ್ದಾರೆ. ಅವರಿಗೆ ಜನಪರ ಕಾಳಜಿ ಇಲ್ಲ.ನೀಚ ರಾಜಕೀಯದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಅವರಿದ್ದಾರೆ. ಅಧಿಕಾರಕ್ಕೆ ಅವರು ಖಂಡಿತಾ ಬರುವುದಿಲ್ಲ. ಅಧಿಕಾರವಿಲ್ಲದೆ ಹತಾಶರಾಗಿ ಸಲ್ಲದ ಆರೋಪಗಳನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಪೇಸಿಎಂ ಅಭಿಯಾನದ ವಿರುದ್ಧ ಕಾನೂನಾತ್ಮ ಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಪಿಎಫ್‌ಐ ಬೆಳವಣಿಗೆಗೆ ಸಂಬಂಧಿಸದಂತೆ ರಾಜ್ಯದ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲವು ಮಾಧ್ಯಮಗಳ ಚುನಾವಣಾ ಪೂ ರ್ವ ಸಮೀಕ್ಷೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. 35 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಜನರ ನಾಡಿಮಿಡಿತ ಅರಿತಿರುವೆ. ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

----