ಜಿಲ್ಲೆ

ಪಿಂಚಣಿ ಅದಾಲತ್​ 14ರಂದು

Dharwada - Basavaraj Idli

ಹುಬ್ಬಳ್ಳಿ: ಇಪಿಎಸ್ 1995 ನಿಬಂಧನೆಗಳ ಕುರಿತು ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್ಒ ವತಿಯಿಂದ ವಿಶೇಷ ವೇದಿಕೆ ಪಿಂಚಣಿ ಅದಾಲತ್ ಅನ್ನು ನ. 14ರಂದು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.

ಆಸಕ್ತ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ಪಿಂಚಣಿ ಅದಾಲತ್ ಎಂದು ನಮೂದಿಸಿ ಇಮೇಲ್
ಮೂಲಕ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ತಿಳಿಸಿದ್ದಾರೆ.