ಇಳಕಲ್ಲ ಎಸ್‌ಎಸ್‌ಕೆ ಸಮಾಜದ ಬಾಂಧವರು ಎಸ್‌ಎಸ್‌ಕೆ ನಿಗಮ ಮಂಡಳಿ ರಚಿಸುವಂತೆ ಆಗ್ರಹಿಸಿ ಗ್ರೇಡ್ ಟು ತಹಸೀಲ್ದಾರ್ ಈಶ್ವರ ಗಡ್ಡಿಯವರಿಗೆ ಮನವಿ ಪತ್ರ ನೀಡಿದರು. ಜಮನಾದಾಸ ಕಾಟವಾ, ನಾಗರಾಜ ರಾಜೊಳ್ಳಿ, ಬಾಬು ರಾಜೊಳ್ಳಿ, ಸಂತೋಷ ರಾಜೊಳ್ಳಿ, ನಾಗರಾಜ ನಗರಿ, ಪರಶುರಾಮ ಪವಾರ, ಜಗದೀಶ್ ರಾಜೊಳ್ಳಿ, ಮಹದೇವಸಾ ಕಾಟವಾ, ರವಿನಾರಾಯಣ ರಾಯಬಾಗಿ ಇದ್ದರು. 
ಜಿಲ್ಲೆ

ನಿಗಮ ಮಂಡಳಿ ರಚಿಸಲು ಆಗ್ರಹಿಸಿ ಮನವಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ(ಗ್ರಾ): ರಾಜ್ಯದಲ್ಲಿ ವಾಸಿಸುವ ಎಸ್‌ಎಸ್‌ಕೆ ಸಮುದಾಯದ ಕಲ್ಯಾಣಕ್ಕಾಗಿ ಕೂಡಲೇ ನಿಗಮ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ಸಮಾಜ ಬಾಂಧವರು ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಸಮಾಜದ ಅಧ್ಯಕ್ಷ ಜಮನಾದಾಸ ಕಾಟವಾ ಮಾತನಾಡಿ, ಎಸ್‌ಎಸ್‌ಕೆ ಸಮಾಜದವರಲ್ಲಿ ಶೇ.15ರಷ್ಟು ಜನ ಶ್ರೀಮಂತರಾಗಿದ್ದು ಉಳಿದ ಶೇ.85 ರಷ್ಟು ಜನ ಬಡತನ ರೇಖೆಯಲ್ಲಿಯೇ ಇದ್ದಾರೆ. ಸೋಡಾ ಅಂಗಡಿ, ಸಾವಜಿ ಖಾನಾವಳಿ ನಡೆಸುತ್ತ ದೈನಂದಿನ ಬದುಕು ನಡೆಸುತ್ತಿದ್ದು ಸಾಕಷ್ಟು ತೊಂದರೆಯಲ್ಲಿದ್ದಾರೆ. ಸಮುದಾಯವನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಸಹಸ್ರಾರ್ಜುನ ಸೂರ್ಯವಂಶ ಮಹಾರಾಜರ ಜನುಮ ದಿನವನ್ನಾಗಿ ಸರ್ಕಾರದ ವತಿಯಿಂದ ಸುತ್ತೋಲೆ ಕಳುಹಿಸಿ ರಾಜ್ಯಾದ್ಯಂತ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರೇಡ್ ಟು ತಹಸೀಲ್ದಾರ್ ಈಶ್ವರ ಗಡ್ಡಿ ಮನವಿ ಸ್ವೀಕರಿಸಿದರು. ನಾಗರಾಜ ರಾಜೊಳ್ಳಿ, ಬಾಬು ರಾಜೊಳ್ಳಿ, ಸಂತೋಷ ರಾಜೊಳ್ಳಿ, ನಾಗರಾಜ ನಗರಿ, ಪರಶುರಾಮ ಪವಾರ, ಜಗದೀಶ್ ರಾಜೊಳ್ಳಿ, ಮಹದೇವಸಾ ಕಾಟವಾ, ರವಿನಾರಾಯಣ ರಾಯಬಾಗಿ, ಸುನೀಲ್ ಚವ್ಹಾಣ, ನರಸಿಂಗ್ ಕಾಟವಾ, ರಾಘವೇಂದ್ರ ಕಾಟವಾ ಇತರರಿದ್ದರು.