ಧಾರವಾಡ: ಅಂಗನವಾಡಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು. ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಭುವನ ಬಳ್ಳಾರಿ, ಮುಖಂಡರಾದ ಕಸ್ತೂರಿ ಅಗಸಿಮನಿ, ಶಿವಲೀಲಾ ಹುಲ್ಲೂರ, ಸರೋಜಿನಿ ಹುಲಸೇರ, ಕವಿತಾ ಮಸೂತಿ, ಮಹಾದೇವಿ ಗುರಣ್ಣವರ, ಕಲಾವತಿ ಪಿರಗಣ್ಣನವರ, ಇತರರು ಇದ್ದರು.