ಆದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ 5ನೇ ಬಾರಿಯ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಮತ್ತು ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. 
ಜಿಲ್ಲೆ

ಸತ್ಕಾರ್ಯಕ್ಕೆ ವಿನಿಯೋಗಿಸಿದರೆ ಪುಣ್ಯವೆಂಬ ಬಡ್ಡಿ : ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭನುಡಿ

Vijayavan
ಗುರುಪುರ:

ದಕ್ಷಿಣ ಕನ್ನಡ ಹಾಗೂ ಹೊರ ಜಿಲ್ಲೆ ರಾಜ್ಯಗಳಲ್ಲಿ ಹತ್ತು ಹಲವಾರು ದೇವ-ದೈವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಗಳ ಮುಂದಾಳತ್ವ ವಹಿಸಿರುವ ಅನುಭವಿ ಧಾರ್ಮಿಕ ಮುಖಂಡ ಶೆಡ್ಡೆ ಮಂಜುನಾಥ ಭಂಡಾರಿಯವರಿಗೆ ಈ ಬಾರಿ ಆದ್ಯಪಾಡಿ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಿಸುವ ಭಾಗ್ಯ ಬಂದಿದೆ.

— ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಪ್ರಧಾನ ಅರ್ಚಕ ಶ್ರೀ ಕ್ಷೇತ್ರ ಕಟೀಲು

ಭಗವಂತನ ಸಂಕಲ್ಪದಂತೆ ನಡೆಯುವ ಈ ಪುಣ್ಯದ ಕಾರ್ಯದಲ್ಲಿ ಭಾಗವಹಿಸುವುದು ನಮ್ಮ ಭಾಗ್ಯ. ನಮ್ಮ ಸಂಪತ್ತಿನ ಸದ್ವಿನಿಯೋಗದೊಂದಿಗೆ ಅದರ ಪುಣ್ಯ ಸಿಗಲಿದೆ. ‘ಉಮಾಮಹೇಶ್ವರ’ ಎಂದರೆ ತಂದೆ-ತಾಯಿಯಂತೆ ಕಾಪಾಡುವ ದೇವರ ಕ್ಷೇತ್ರ. ಇಲ್ಲಿ ನಡೆಯುವ ದೇವರ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು. ಪುಣ್ಯದ ಫಲ ಎಲ್ಲರಿಗೂ ಸಿಗಲಿ.

— ಶ್ರೀ ರಾಜಶೇಖರಾನಂದ ಸ್ವಾಮೀಜಿ, ಗುರುಪುರ ಶ್ರೀ ವಜ್ರದೇಹಿ ಮಠ