ಅರಕಲಗೂಡಿನಲ್ಲಿ ಅಂಬೇಡ್ಕರ್ ಸಮುದಾಯದ ಭವನದ ಖಾತೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜನಾಂಗದ ಕ್ಷೇಮಾಭಿವೃದ್ಧಿ ಸಮಿತಿ ಹೆಸರಿಗೆ ಜಂಟಿಯಾಗಿ ಮಾಡುವಂತೆ ಕೋರಿ ದಲಿತ ಸಂಘಟನೆಗಳ ಮುಖಂಡರು ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಅಂಬೇಡ್ಕರ್ ಭವನದ ಜಂಟಿ ಖಾತೆಗೆ ಮನವಿ

ಅರಕಲಗೂಡು: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯದ ಭವನದ ಖಾತೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜನಾಂಗದ ಕ್ಷೇಮಾಭಿವೃದ್ಧಿ ಸಮಿತಿ ಹೆಸರಿಗೆ ಜಂಟಿಯಾಗಿ ಮಾಡುವಂತೆ ಕೋರಿ ದಲಿತ ಸಂಘಟನೆಗಳ ಮುಖಂಡರು ಇತ್ತೀಚೆಗೆ ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.

20 ವರ್ಷಗಳಿಂದ ಪರಿಶಿಷ್ಟ ಜನಾಂಗದ ಕ್ಷೇಮಾಭಿವೃದ್ಧಿ ಸಮಿತಿ ಭವನದ ನಿರ್ವಹಣೆ ನಡೆಸುತ್ತ ಬಂದಿದೆ. ಭವನದ ಜಾಗ ದಾನ ಪತ್ರದ ಮೂಲಕ ಸಮಿತಿಗೆ ಬಂದಿದ್ದು ಇದರ ಆಧಾರದ ಮೇಲೆ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಹೆಸರಿಗೆ ಜಂಟಿ ಖಾತೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ತಪ್ಪುಗ್ರಹಿಕೆ ಮತ್ತು ನಿರ್ಲಕ್ಷೃದಿಂದ ಸಮಿತಿಯ ಹೆಸರನ್ನು ಹೊರತು ಪಡಿಸಿ ಕೇವಲ ಇಲಾಖೆಯ ಹೆಸರಿಗೆ ಮಾತ್ರ ಖಾತೆ ಮಾಡಲಾಗಿದೆ. ದಾನ ಪತ್ರದ ಆಧಾರದ ಮೇಲೆ ಸಮಿತಿ ಮತ್ತು ಇಲಾಖೆ ಹೆಸರಿಗೆ ಜಂಟಿ ಖಾತೆ ಮಾಡುವಂತೆ ಮನವಿ ಯಲ್ಲಿ ಕೋರಲಾಗಿದೆ. ಪಪಂ ಸದಸ್ಯರಾದ ಅನಿಕೇತನ್, ಕೃಷ್ಣಯ್ಯ, ಹೂವಣ್ಣ, ನಿವೃತ್ತ ಪಿಎಸ್‌ಐ ಎಸ್.ಪಿ. ಕೃಷ್ಣಕುಮಾರ್, ವಕೀಲ ಶಂಕರಯ್ಯ, ದಲಿತ ಸಂಘಟನೆಗಳ ಮುಖಂಡರಾದ ಸಣ್ಣಸ್ವಾಮಿ, ಚಂದ್ರಣ್ಣ, ಶಂಕರ್, ನಟರಾಜ್ ಇದ್ದರು.