ಜಿಲ್ಲೆ

ಸರ್ಕಾರದ ಕ್ರಮ ಖಂಡಿಸಿ ಮನವಿ

ಶಿಗ್ಗಾಂವಿ: ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ವತಿಯಿಂದ ಮಂಗಳವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಿಂದ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ನೀರನ್ನು ಹರಿಸುವ ಪರಿಸ್ಥಿಯಲ್ಲಿ ಕರ್ನಾಟಕ ಇರುವುದಿಲ್ಲ. ಕೆಆರ್‌ಎಸ್ ಡ್ಯಾಮಿನಿಂದ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಈ ಭಾಗದ ಜನ ಹಾಗೂ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಜತೆಗೆ ಕಾವೇರಿ, ಮೇಕೆದಾಟು, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಕಬ್ಬು, ತೋಟಗಾರಿಕಾ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರ ರೈತರ ಹಿತವನ್ನು ಬಲಿಕೊಡದೇ ಯಾವುದೇ ಕಾರಣಕ್ಕೂ ಅನ್ಯ ರಾಜ್ಯಗಳಿಗೆ ನೀರನ್ನು ಹರಿಸಬಾರದೆಂದು ಒತ್ತಾಯಿಸಿದರು.

ಶಿರಸ್ತೇದಾರ ವಿಲ್ಸನ್ ಅವರು ಮನವಿ ಸ್ವೀಕರಿಸಿದರು. ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷ ರಾಮು ತಳವಾರ, ಗಂಗಾಧರಯ್ಯ ಕಲ್ಮಠ, ಸುರೇಶ ವನಹಳ್ಳಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಭರಮಪ್ಪ ದೊಡ್ಡಮನಿ, ಬಸವರಾಜ ಗುರನಹಳ್ಳಿ, ಮಾಲತೇಶ ಕಾಳಿ, ಚಂದ್ರು ಮುಂಚಿನಕೊಪ್ಪ, ಯಲ್ಲಪ್ಪ ಲಕ್ಷ್ಮೇಶ್ವರ, ಮಂಜುನಾಥ ಮೇಲಿನಮನಿ, ಶರಣಪ್ಪ ಹಿಂಡಿ, ತಿಪ್ಪಣ್ಣ ದಳವಾಯಿ, ನಾಗರಾಜ ಹಿರೇಮಠ, ಮಾಂತೇಶ ಕಮ್ಮಾರ, ಸಣ್ಣಪ್ಪ ಕೌಲಗೇರಿ, ವೀರಭದ್ರಗೌಡ ಪೊಲೀಸ್‌ಗೌಡ್ರ, ಶೇಖಪ್ಪ ಬೆಂಡಿಗೇರಿ ಉಪಸ್ಥಿತರಿದ್ದರು.