ಆದರ್ಶ್ ಅದ್ಕಲೇಗಾರ್, ಮಡಿಕೇರಿ
ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಪ್ರಸಕ್ತ ಸಾಲಿನಲ್ಲಿ ಸುಮಾರು ೫ ಲಕ್ಷ ವೆಚ್ಚದಲ್ಲಿ ಸಿದ್ಧತೆ ನಡೆಸಿದೆ.
ಋಷಿ-ಮುನಿಗಳ ತಪಸ್ಸಿಗೆ ಶಿವ-ಪಾರ್ವತಿ ತಮ್ಮ ಪುತ್ರರ ಸಹಿತ ಒಲಿದು ಲೋಕ ಕಲ್ಯಾಣಕ್ಕಾಗಿ ಆಶೀರ್ವಾದ ಮಾಡುವ ಕಥಾ ಸಾರಾಂಶವನ್ನು ಈ ಬಾರಿ ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಪ್ಲಾಟ್ ಫಾರಂ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್‌ನ್ನು ಸಮಿತಿ ಸದಸ್ಯರೆ ಮಾಡಲಿದ್ದು, ದಿಂಡಿಗಲ್‌ನ ಸೆಲ್ವಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ೮ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಬೆಂಗಳೂರಿನ ಕಲಾವಿದ ಮಧುಕರ್ ಕಲಾ ಕೃತಿಗಳನ್ನು ತಯಾರಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಸ್ಕಂದ ಡೆಕೊರೇಟರ್‌ನ ಅನಿ ಒದಗಿಸಲಿದ್ದಾರೆ.
ಇತಿಹಾಸ: ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿರುವ ’ಪೇಟೆ ಶ್ರೀ ರಾಮಮಂದಿರ’, ಭಕ್ತರ ಬೇಡಿಕೆಯನ್ನು ಕಾರ್ಯಸಿದ್ಧಿಗೊಳಿಸುತ್ತದೆ ಎಂಬ ನಿಟ್ಟಿನಲ್ಲಿ ನಗರದ ದೊಡ್ಡಪೇಟೆಯಲ್ಲಿ ನೆಲೆ ನಿಂತಿದ್ದಾನೆ. ದೇವಾಲಯಕ್ಕೆ ಹೆಚ್ಚಾಗಿ ಮದುವೆ ಪ್ರಾಪ್ತಿಗೋಸ್ಕರ ಭಕ್ತರು ಆಗಮಿಸಿದರೆ, ಉಳಿದವರು ತಮ್ಮತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಆಗಮಿಸುತ್ತಾರೆ. ಬೇಡಿಕೆ ಈಡೇರಿದ ನಂತರ ತಾವು ನೆನೆಸಿದನ್ನು ಶ್ರೀರಾಮನಿಗೆ ಅರ್ಪಿಸುತ್ತಾರೆ ಎಂದು ದೇವಾಲಯದ ಅರ್ಚರು ಹೇಳುತ್ತಾರೆ.
ವಿಶೇಷ ಪೂಜೆಗಳು: ಮಹಾಗಣಪತಿಗೆ: ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಗಣಪರಿ ಹೋಮ, ಅಷ್ಟೋತ್ತರ ಪೂಜೆ. ರಾಮನಿಗೆ: ಅಷ್ಟೋತ್ತರ ಶತನಾಮಾವಳಿ ಅರ್ಚನೆ, ವಿಷ್ಣು ಸಹಸ್ರನಾಮ ಸೇವೆ, ಅಲಂಕಾರ ಸೇವೆ, ಕುಂಕುಮಾರ್ಚನೆ. ಆಂಜನೇಯ: ವೀಳ್ಯದೆಲೆ ಸೇವೆ ಪವಮಾನ ಅಭಿಷೇಕ. ನವಗ್ರಹ ದೇವತೆ: ನವಗ್ರಹ ಜಪ, ಏಕಗ್ರಹ ಜಪ, ಗ್ರಹಶಾಂತಿ ಹೋಮ, ನವಗ್ರಹ ಪೂಜೆಗಳು ನಡೆಯುತ್ತದೆ.
’ದೇವಾಲಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾಧಿಗಳು ಸೇರಿದಂತೆ ಪ್ರವಾಸಿಗರು ಬರುತ್ತಾರೆ. ಹೆಚ್ಚಾಗಿ ವಿವಾಹ ಪ್ರಾಪ್ತಿಗಾಗಿ ಹರಕೆ ಹೊತ್ತು ಹೋಗುತ್ತಾರೆ. ಈಡೇರಿದ ನಂತರ ದೇವಾಲಯಕ್ಕೆ ಅರ್ಪಿಸುತ್ತಾರೆ. ದೇವಾಲಯದಲ್ಲಿ ವಿಶೇಷವಾಗಿ ಬುಧವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ’ಬಿ.ಎಸ್.ಶ್ರೀಕಾಂತ್ ಭಟ್, ಅರ್ಚಕರುಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಸಾರಥಿ ಎಂಬ ಖ್ಯಾತಿ ಪಡೆದಿರುವ ನೂರಾರು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಸಮಿತಿ ಈ ಬಾರಿಯ ಉತ್ಸವಕ್ಕೆ ಸಜ್ಜಾಗುತ್ತಿದೆ. ಒಟ್ಟು ರೂ.೫ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಸಾಂಪ್ರದಾಯಿಕ ಆಚರಣೆಯೊಂದಿಗೆ ಜನಾಕರ್ಷಣೆಗೆ ಒತ್ತು ನೀಡಲಾಗುವುದು.ಎಂ.ಡಿ.ಸುರೇಶ್, ಅಧ್ಯಕ್ಷರು, ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ