ಕಂಪ್ಲಿಯಲ್ಲಿ ಪೇಟೆ ಬಸವೇಶ್ವರ ಮತ್ತು ಕೂಲಿಕಟ್ಟೆ ಬಸವೇಶ್ವರ ದೇವರ ಗಂಗೆಸ್ಥಳ ಜೋಡಿ ಮೆರವಣಿಗೆ ಜರುಗಿತು. ಸದ್ಭಕ್ತರಾದ ಯು.ಎಂ.ವಿದ್ಯಾಶಂಕರ್, ಎಲಿಗಾರ ವೆಂಕಟರೆಡ್ಡಿ, ಎಸ್.ಬಂಡೆಯ್ಯಸ್ವಾಮಿ, ಎಂ.ಶರಣಪ್ಪಗೌಡ, ಕೆ.ಎಂ.ಸಿದ್ಧರಾಮೇಶ್ವರಶಾಸ್ತ್ರಿ ಸೇರಿ ಇತರರಿದ್ದಾರೆ. 
ಜಿಲ್ಲೆ

ಪೇಟೆ ಬಸವೇಶ್ವರ, ಕೂಲಿಕಟ್ಟೆ ಬಸವೇಶ್ವರ ದೇವರ ಗಂಗೆಸ್ಥಳ ಕಾರ್ಯಕ್ರಮ

ಪ್ರವೀಣ ಉದುಸಾ ದಲಬಂಜನ್

ಕಂಪ್ಲಿ: ಪಟ್ಟಣದ ಆರಾಧ್ಯದೈವ ಪೇಟೆ ಬಸವೇಶ್ವರ ಮತ್ತು ಕೂಲಿಕಟ್ಟೆ ಬಸವೇಶ್ವರ ದೇವರ ಗಂಗೆಸ್ಥಳ ಜೋಡಿ ಮೆರವಣಿಗೆ ಸೋಮವಾರ ಶ್ರದ್ಧಾಭಕ್ತಿಗಳಿಂದ ಸಂಪನ್ನಗೊಂಡಿತು. ತುಂಗಭದ್ರಾ ನದಿ ತಟದ ಗಂಗಮ್ಮನ ಕಟ್ಟೆಯಿಂದ ಗಂಗೆಸ್ಥಳ ಮೆರವಣಿಗೆ ಆರಂಭಗೊಂಡು ಪ್ರಮುಖಬೀದಿಗಳಲ್ಲಿ ಸಾಗಿತು.

ಉತ್ಸವ ಮೂರ್ತಿಗಳ ಮೆರವಣಿಗೆ

ಹೇರೂರು ವಿರುಪನಗೌಡ ತಾತನ ಭಜನಾ ಮಂಡಳಿಯವರು, ಧರ್ಮಕರ್ತ ಯು.ಎಂ.ವಿದ್ಯಾಶಂಕರ್, ಅಧ್ಯಕ್ಷ ಎಲಿಗಾರ ವೆಂಕಟರೆಡ್ಡಿ ಸದ್ಭಕ್ತರಾದ ಸತೀಶ್ ಜವುಕಿನ್, ಎಸ್.ಬಂಡೆಯ್ಯಸ್ವಾಮಿ, ಎಂ.ಶರಣಪ್ಪಗೌಡ, ಗಂಡಿ ಗಣೇಶ್, ಗಾಣಿಗೇರ ಮಂಜುನಾಥ, ನವೀನ್‌ಗೌಡ, ಪಟ್ಟಣಶೆಟ್ಟಿ ಗಣೇಶ್, ಬಿ.ಶಿವಾನಂದ, ಗಣೇಶ್, ಕೆ.ಎಂ.ಸಿದ್ಧರಾಮೇಶ್ವರಶಾಸ್ತ್ರಿ, ಮುತ್ತಣ್ಣ ಸೇರಿ ನಾನಾ ಸಮುದಾಯಗಳ ಸದ್ಭಕ್ತರಿದ್ದರು.