ಚಿಕ್ಕಮಗಳೂರು: ಮೋಹಕ ಬಲೆಗಳನ್ನು ಬಳಸುವ ಮೂಲಕ ಕೀಟಗಳನ್ನು ಆಕರ್ಷಿಸುವ ಮೂಲಕ ಅವುಗಳ ನಿರ್ವಹಣೆ ಮಾಡುವ ಮೂಲಕ ಬೆಳೆಗಳನ್ನು ಕೀಟಗಳಿಂದ ಮುಕ್ತ ಮಾಡಬಹುದು ಎಂದು ಕೃಷಿ ವಿಜ್ಞಾನಿ ಡಾ. ಸೈಯದ್ ಇಮ್ರಾನ್ ತಿಳಿಸಿದರು.
ಸಖರಾಯಪಟ್ಟಣ ಸಮೀಪದ ಲಕ್ಕಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಕುನ್ನಾಳು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಮೋಹಕ ಬಲೆಗಳ ಬಳಕೆ ಕುರಿತು ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿದರು.
ರೈತರ ತೋಟಗಳಿಗೆ ಭೇಟಿ ನೀಡಿ ತೋಟಗಳಲ್ಲಿ ಮೋಹಕ ಬಲೆಗಳನ್ನು ಹೇಗೆ ಅಳವಡಿಕೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಲ್ಲದೆ, ತೋಟಗಳಲ್ಲಿ ಕೀಟಗಳ ನಿರ್ವಹಣೆಗೆ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ರೈತರಿಗೆ ವಿವರಿಸಲಾಯಿತು.
ರೈತರಾದ ಯತೀಶ್ ಜಗದೀಶ್ ಆರಾಧ್ಯ, ಸೋಮಣ್ಣ, ವಿದ್ಯಾರ್ಥಿಗಳಾದ ಪ್ರಶಿಕ್ಷಣಾರ್ಥಿಗಳಾದ ಚೈತ್ರ, ದೀಕ್ಷಿತಾ, ಪಲ್ಲವಿ, ವಿಶಾಲ ಉಪಸ್ಥಿತರಿದ್ದರು.