ಮಂಡ್ಯ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ 17 ವರ್ಷದೊಳಗಿನ ಬಾಲಕರ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ನಗರದ ಪಿಇಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿ.ಶಶಾಂಕ್, ಶಶಾಂಕ್‌ಗೌಡ, ಆದರ್ಶ, ಪವನ್‌ಕುಮಾರ್, ಪವನ್, ಪುನೀತ್, ರವಿಕುಮಾರ್, ಪ್ರೀತಮ್, ಶ್ರೀಧರ್, ಧನುಷ್, ಭರತ್ ತಂಡದಲ್ಲಿದ್ದರು. ಚಾಂಪಿಯನ್ ತಂಡಕ್ಕೆ ಗುರುವಾರ ಶಾಲೆಯ ಮುಖ್ಯಶಿಕ್ಷಕಿ ಲತಾ, ಮಂಡ್ಯ ತಾಲೂಕು ದಕ್ಷಿಣ ವಲಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಂಗಲ ಪಾರಿತೋಷಕ ನೀಡಿ ಅಭಿನಂದಿಸಿದರು. ಶಿಕ್ಷಕರಾದ ಜಿ.ಎಂ.ರವಿಚಂದ್ರ, ಟಿ.ಅಶೋಕ್, ಪವಿತ್ರಾ, ಚೇತನಾ, ಮಧು ಇದ್ದರು.