ಜಿಲ್ಲೆ

ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ - ಪೆರುವಾಯಿ ಗ್ರಾಮಸಭೆಯಲ್ಲಿ ಗದ್ದಲ - ಪೊಲೀಸ್ ಮಧ್ಯಸ್ಥಿಕೆ

Mangaluru - Nishantha Narayana

ವಿಟ್ಲ: ಪೆರುವಾಯಿ ಗ್ರಾಮ ಪಂಚಾಯಿತಿ ದ್ವಿತೀಯ ಸುತ್ತಿನ ಗ್ರಾಮಸಭೆಯ ವರದಿಯಲ್ಲಿ ಕಳೆದ ಸಭೆಯ ಅಂತಿಮ ಶುಲ್ಕ ಹಾಗೂ ಈಗಿನ ಸಭೆಯ ಆರಂಭಿಕ ಶುಲ್ಕದ ನಡುವೆ ವ್ಯತ್ಯಾಸವಿದೆ. ಕೆಲವು ಕಾಮಗಾರಿಗಳು ಮತ್ತು ಖರ್ಚು ಮಾಡದೆ ಪಂಚಾಯಿತಿ ಖಾತೆಯಿಂದ ಹಣ ತೆಗೆಯಲಾಗಿದೆ ಎಂಬ ಗಂಭೀರ ಆರೋಪ ಕೊಲಾಹಲಕ್ಕೆ ಕಾರಣವಾಯಿತು.

ಎರಡು ಗ್ರಾಮಸಭೆಯ ವರದಿಗೂ ಬ್ಯಾಂಕ್ ಖಾತೆಯ ವಿವರಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಸುಮಾರು ೯ ಲಕ್ಷದಷ್ಟು ವ್ಯತ್ಯಾಸವಿದ್ದು, ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಉತ್ತರ ನೀಡಬೇಕೆಂದು ಗ್ರಾಮಸ್ಥ ಯತೀಶ್ ಪೆರುವಾಯಿ ಆಗ್ರಹಿಸಿದರು. ಇದಾಗುತ್ತಿದಂತೆ ಅಧ್ಯಕ್ಷರ ರಾಜೀನಾಮೆ ನೀಡಬೇಕೆಂಬ ಒತ್ತಾಯ ಪ್ರಾರಂಭವಾಯಿತು.

ಸಭೆಯಲ್ಲಿ ಬೇರೆ ಕೆಲವು ಇಲಾಖೆಯ ಅಽಕಾರಿಗಳು ಗದ್ದಲದ ನಡುವೆ ಮಾಹಿತಿ ನೀಡಿದ್ದಾರೆಂದು ಅಽಕಾರಿ ವರ್ಗ ಹೇಳಿಕೊಂಡಿದ್ದರೆ, ಗ್ರಾಮಸ್ಥರು ಕೇವಲ ಒಂದು ಇಲಾಖೆಯ ಮಾಹಿತಿ ನೀಡಿ ಉಳಿದ ಇಲಾಖೆಯ ಮಾಹಿತಿ ನೀಡದೆ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ. ಗ್ರಾಮಸ್ಥರ ಪಟ್ಟು ಹಾಗೂ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಗ್ರಾಮಸಭೆಯನ್ನು ಕೊನೆಗೊಳಿಸಲಾಯಿತು.

ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫಿಸಾ ವಹಿಸಿದ್ದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಟೇಶ್ ಕುಮಾರ್ ಮಾರ್ಗದರ್ಶಿ ಅಽಕಾರಿಯಾಗಿದ್ದರು.ಪಿಡಿಒ ಅಶೋಕ್ ಎ., ಉಪಾಧ್ಯಕ್ಷೆ ಲಲಿತಾ, ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸುವ ಜತೆಗೆ ಇಲಾಖೆಗಳ ಮಾಹಿತಿಯನ್ನು ಜನರಿಗೆ ನೀಡುವ ನಿಟ್ಟಿನಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಸಮಸ್ಯೆಗಳಿದ್ದರೆ ಬರವಣಿಗೆ ಮೂಲಕ ನೀಡಿದರೆ ಸಂಬಂಧಪಟ್ಟ ಅಽಕಾರಿಗಳಿಗೆ ಕಳುಹಿಸಿ ಅಗತ್ಯ ಕ್ರಮಕ್ಕೆ ಕೇಳಿಕೊಳ್ಳಲಾಗುತ್ತದೆ. ಸ್ಥಳದಲ್ಲೇ ಇದಕ್ಕೆ ಕ್ರಮ ಕೈಗೊಳ್ಳಬೇಕು, ಉತ್ತರ ನೀಡಬೇಕೆಂದರೆ ಅದು ಸಾಧ್ಯವಿಲ್ಲ.

| ನಟೇಶ್ ಕುಮಾರ್

ಮಾರ್ಗದರ್ಶಿ ಅಽಕಾರಿ