ಜಿಲ್ಲೆ

ಪೆರುವಾಯಿಯಲ್ಲಿ ಯುವಕ ಯುವತಿ ಬೈಕ್ ಗೆ ತಡೆ

Mangaluru - Nishantha Narayana

ವಿಟ್ಲ: ಕುದ್ದುಪದವು - ಬೆರಿಪದವು ಪೆರುವಾಯಿಯಲ್ಲಿ ಕೇರಳ ಮೂಲದ ಯುವಕ ಯುವತಿ ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವುದನ್ನು ಹಿಂಬಾಲಿಸಿಕೊಂಡು ಬಂದು ತಡೆದು ನಿಲ್ಲಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕೇರಳ ಭಾಗದಿಂದ ಬೇರೆ ಸಮುದಾಯದ ಯುವತಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುವ ವಿಚಾರ ತಿಳಿದು, ಅಲ್ಲಿನ ಕೆಲವು ಯುವಕರು ಹಿಂಬಾಲಿಸಿ ಬಂದು ಪೆರುವಾಯಿಯಲ್ಲಿ ನಡೆದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಸೇರಿದ್ದರಿಂದ ಕೆಲವು ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗಂಭೀರ ಘಟನೆಯ ಬಗ್ಗೆ ತಿಳಿಸಿದರೂ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸುವ ಕಾರ್ಯವಾಗಿಲ್ಲ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವ ಕಾರ್ಯವನ್ನು ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ವರಿಷ್ಠಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಯುವಕ ಯುವತಿಯರನ್ನು ಠಾಣೆಗೆ ಕರೆಸಿಕೊಳ್ಳುವ ಕಾರ್ಯ ಮಾಡಿದರು.