ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಿಂದುಸ್ತಾನಿ ಸಂಗೀತ, ಚಿತ್ರಕಲೆ, ಶಿಲ್ಪಕಲಾ ತರಗತಿ ಪ್ರವೇಶ ಜಾಗೃತಿ ಅಭಿಯಾನವನ್ನು ಕನ್ನಡ ವಿವಿ ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಉದ್ಘಾಟಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ಪ್ರಾಚಾರ್ಯರಾದ ನಾಗರಾಜ ಹವಾಲ್ದಾರ, ಎಲ್.ಬಿ.ಕೃಷ್ಣನಾಯ್ಕ ಇತರರಿದ್ದರು. 
ಜಿಲ್ಲೆ

ವ್ಯಕ್ತಿತ್ವ ವೃದ್ಧಿಸಲಿದೆ ಕಲೆ

Kopala - Desk - Eraveni

ಹೊಸಪೇಟೆ: ಕನ್ನಡ ವಿವಿಯ ಸಂಗೀತ, ನೃತ್ಯ ಹಾಗೂ ದೃಶ್ಯಕಲಾ ವಿಭಾಗದಿಂದ ಕಮಲಾಪುರದ ಸರ್ಕಾರಿ ಪಪೂ ಕಾಲೇಜಿನಲ್ಲಿ ಹಿಂದುಸ್ತಾನಿ ಸಂಗೀತ, ಚಿತ್ರಕಲೆ, ಶಿಲ್ಪಕಲಾ ಕೋರ್ಸ್ ಪ್ರವೇಶಕ್ಕಾಗಿ ಜಾಗೃತಿ ಅಭಿಯಾನ ಸೋಮವಾರ ನಡೆಸಲಾಯಿತು.

ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಮಾತನಾಡಿ, ಕಲೆ ಜನರಲ್ಲಿ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದರು. ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಸಂಗೀತ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಭಾವನೆ ಬೆಳೆಸುತ್ತದೆ ಎಂದರು.

ಚಿತ್ತವಾಡ್ಗಿ ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ ಮಾತನಾಡಿ, ಕನ್ನಡ ವಿವಿ ಹಳೆಯ ಬೇರಿನೊಂದಿಗೆ ಹೊಸ ಚಿಗುರು ಎನ್ನುವಂತೆ ಹೊಸ ಚಿಂತನೆಗಳನ್ನು ನಾಡಿಗೆ ಬಿತ್ತರಿಸುತ್ತದೆ. ಕಲಿಯುಗದ ಹಂಪಿಯ ಪ್ರತಿನಿಧಿಯಾಗಿದೆ ಎಂದರು. ಪ್ರಾಚಾರ್ಯ ಎಲ್.ಬಿ.ಕೃಷ್ಣನಾಯ್ಕ, ಹಳೆಯ ವಿದ್ಯಾರ್ಥಿ ಶ್ರೀನಿವಾಸ, ಉಪನ್ಯಾಸಕರಾದ ನಿಸಾರ ಅಹ್ಮದ್, ಪ್ರಭು, ನಾಗಭೂಷಣ ಇತರರಿದ್ದರು.