ಜಿಲ್ಲೆ

ರಂಗಭೂಮಿಯಿಂದ ವ್ಯಕ್ತಿತ್ವ ರೂಪು

Avinash R

ವಿಜಯವಾಣಿ ಸುದ್ದಿಜಾಲ ಗುರುಪುರ

ಸಾವಿರದ ಕ್ಷಣಗಳು ಎಂದರೆ ಸಾವು ಇರದ ಕ್ಷಣಗಳು ಎಂದು ಅರ್ಥ ವಿವರಣೆ ನೀಡಬಹುದು. ರಂಗದಿನದ ಮೂಲಕ ಇಂದು ಇಲ್ಲಿ ಗ್ರಾಮ ಒಂದಾಗಿದೆ. ವ್ಯಕ್ತಿತ್ವ ರೂಪಿಸಲು ರಂಗಭೂಮಿ ಒಂದು ಉತ್ತಮ ಮಾಧ್ಯಮ. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ರಂಗ ಚಟುವಟಿಕೆ ನಡೆಯಬೇಕು ಎಂದು ಸಾಹಿತಿ ಮುದ್ದು ಮೂಡುಬೆಳ್ಳೆ ಹೇಳಿದರು.

ಶನಿವಾರ ಉಳಾಯಿಬೆಟ್ಟು ಗ್ರಾಪಂ ಸಭಾಗೃಹದಲ್ಲಿ ಆಯೋಜಿಸಲಾದ "ರಂಗದಿನ' ಕಾರ್ಯಕ್ರಮದಲ್ಲಿ ಸಾಹಿತಿ ವಾಮನ ನಂದಾವರ ಅವರ "ಸಾವಿರದ ಕ್ಷಣಗಳು' ನಾಟಕ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಲೇಖಕಿ ಡಾ.ಚಂದ್ರಕಲಾ ನಂದಾವರ ಮಾತನಾಡಿದರು. ಉಳಾಯಿಬೆಟ್ಟಿನ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಾಮನ ನಂದಾವರ ಅವರ "ಮಳೆರಾಜನಿಗೊಂದು ಮನವಿ' ಪ್ರಹಸನ ಪ್ರದರ್ಶಿಸಿದರು.

ಸಾಹಿತಿ ವಾಮನ ನಂದಾವರ, ಕಲಾಭಿ ನಾಟಕ ತಂಡದ ಅಧ್ಯೆ ಡಾ.ಮೀನಾ ರಾಮಚಂದ್ರ, ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸಾಯಿರಾಮ ಹೆಗ್ಡೆ, ನಾಟಕ ಕಲಾವಿದ ರಾಜೀವ ಶೆಟ್ಟಿ ಸಲ್ಲಾಜೆ, ಕಲಾಭಿ ನಾಟಕ ತಂಡದ ಗೌರವಾಧ್ಯಕ್ಷ ಸುರೇಶ್​ ಬಿ.ವರ್ಕಾಡಿ, ಎಸ್​ಡಿಎಂಸಿ ಅಧ್ಯಕ್ಷ ಅಬ್ದುಲ್​ ನಾಸಿರ್​, ಉಳಾಯಿಬೆಟ್ಟು ಮಾ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕಿ ಜಾನೆಟ್​ ರೋಚ್​, ಉಳಾಯಿಬೆಟ್ಟು ಮೌಲಾನ ಆಜಾದ್​ ಶಾಲೆಯ ಮುಖ್ಯಶಿಕ್ಷಕ ಗಂಗಾಧರ, ಅಂಬೇಡ್ಕರ್​ ವಸತಿ ಶಾಲೆಯ ಶಿಕ್ಷಕ ಜಯಕರ ಶೆಟ್ಟಿ, ಮಹಮ್ಮಯಿ ಸ್ಪೋರ್ಟ್ಸ್​ ಕ್ಲಬ್​ ಅಧ್ಯಕ್ಷ ಹರೀಶ್​ ಕಿನ್ನಿಬೆಟ್ಟು ಉಪಸ್ಥಿತರಿದ್ದರು.

ಉಳಾಯಿಬೆಟ್ಟು ಪಿಡಿಒ ಅನಿತಾ ವಿ.ಕ್ಯಾಥರಿನ್​ ಸ್ವಾಗತಿಸಿದರು. ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಸದಸ್ಯರು, ಉಳಾಯಿಬೆಟ್ಟು ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮೌಲನಾ ಆಜಾದ್​ ಶಾಲೆ ಮತ್ತು ಅಂಬೇಡ್ಕರ್​ ವಸತಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಿಕ್ಷಕ ಚೇತನ ಕೊಪ್ಪ ವಂದಿಸಿದರು. ಬಳಿಕ ಕಲಾಭಿ ಥಿಯೇಟರ್​ ತಂಡದ ಕಲಾವಿದರಿಂದ ರಮೇಶ್​ ಕೆ.ಬೆನಕಲ್​ ನಿರ್ದೇಶನದ "ಹೋಲಿಗೆ ತುಪ್ಪ ಮತ್ತು ಪೋತರಾಜ' ಜಾನಪದ ನಾಟಕ ಪ್ರದರ್ಶನಗೊಂಡಿತು.

ಹಿಂದಿನವರ ಕನಸಿನಂತೆ ಈಗ ಒಂದಷ್ಟು ರಾಮರಾಜ್ಯ ಕಾಣಬಹುದಾದರೂ ಗ್ರಾಮ ರಾಜ್ಯದ ಕನಸು ಇನ್ನೂ ನನಸಾಗಿಲ್ಲ ಎಂಬ ಬೇಸರವಿದೆ. ಮಕ್ಕಳಿಗೆ ಧರ್ಮದೊಳಗಿನ ನೈತಿಕತೆ ಕಲಿಸಿಕೊಡಬಹುದಾದ ಉತ್ತಮ ಮಾಧ್ಯಮ ರಂಗಮಾಧ್ಯಮ. ಮುಂದಿನ ಪೀಳಿಗೆ ಸಂತೋಷದಿಂದ ಇರಬೇಕಿದ್ದರೆ ಹಳೆಯ ಆಚಾರ& ವಿಚಾರ, ಚಿಂತನಾಧಾರೆ ಎರೆಯಬೇಕು. ಡಿಜಿಟಲೀಕರಣವಿದ್ದರೂ ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ ತಮ್ಮದೇ ಕ್ಷೇತ್ರದಲ್ಲಿ ಸಾಧನೆಗೈಯಬೇಕು. ಡಾ.ಚಂದ್ರಕಲಾ ನಂದಾವರ, ಲೇಖಕಿ
ಡಾ.ಚಂದ್ರಕಲಾ ನಂದಾವರ, ಲೇಖಕಿ