ಕುಂದಾಪುರದ ಎಕ್ಸಲೆಂಟ್​ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನಯನಾ ಉದ್ಘಾಟಿಸಿದರು. ಎಂ.ಮಹೇಶ ಹೆಗ್ಡೆ, ನಾಗರಾಜ್​ ಶೆಟ್ಟಿ, ಸರೋಜಿನಿ ಪಿ. ಆಚಾರ್ಯ ಇದ್ದರು. 
ಜಿಲ್ಲೆ

ಸಾಮರ್ಥ್ಯ ಗಳಿಕೆಗೆ ನಿರೀಕ್ಷಿತ ಗುರಿ ಮುಖ್ಯ

ಪ್ರಶಾಂತ ಜಿ. ಭಾಗ್ವತ

ಆರ್​ಜೆ ನಯನಾ ಅನಿಸಿಕೆ | ಎಕ್ಸಲೆಂಟ್​ನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮಲ್ಲಿರುವ ಸಾಮರ್ಥ್ಯಗಳು ಹುಟ್ಟಿನಿಂದ ಬರುವಂತಹದ್ದಲ್ಲ. ಅದರ ಗಳಿಕೆಗೆ ಸತತ ಪ್ರಯತ್ನ ಅಗತ್ಯ. ಜೀವನದಲ್ಲಿ ಸಾಮರ್ಥ್ಯ ಗಳಿಸಬೇಕೆಂದರೆ ನಿರೀಕ್ಷಿತ ಗುರಿ ಮುಖ್ಯ ಎಂದು ಎಫ್​ಎಂ ರೇಡಿಯೋ ಮಂಗಳೂರಿನ ಆರ್​ಜೆ ನಯನಾ ಅನಿಸಿಕೆ ವ್ಯಕ್ತಪಡಿಸಿದರು.

ಕುಂದಾಪುರದ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್​ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲ್​ನಲ್ಲಿ ಇತ್ತೀಚೆಗೆ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೆಲಸದಲ್ಲಿ ನಂಬಿಕೆ ಅಗತ್ಯ

ಯಾವುದೇ ಕೆಲಸ ಮಾಡಬೇಕೆಂದರೆ ಅದರಲ್ಲಿ ನಂಬಿಕೆ ಮುಖ್ಯ. ಹುಟ್ಟುವಾಗಲೇ ಮನುಷ್ಯನಿಗೆ ಪ್ರತಿಭೆ ಎನ್ನುವುದು ಬರುವುದಿಲ್ಲ. ಅದು ಮನುಷ್ಯ ವಿಕಸನಗೊಂಡಾಗಲೇ ಬರುತ್ತದೆ. ಪ್ರತಿ ವಿದ್ಯಾರ್ಥಿಯಲ್ಲಿಯೂ ವಿಶಿಷ್ಟ ಪ್ರತಿಭೆ ಮತ್ತು ಆಸಕ್ತಿಗಳು ಇರುತ್ತದೆ. ನಾವು ಅದನ್ನು ಗ್ರಹಿಸಿ
ಉತ್ತಮಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಸೂತ್ರ ತಿಳಿಸಿದರು.

ಗುಣ, ನಡತೆ ಮುಖ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಂ.ಹೆಗ್ಡೆ ಎಜುಕೇಶನಲ್​ ಮತ್ತು ಚಾರಿಟೇಬಲ್​ ಟ್ರಸ್ಟ್​ (ರಿ.)ನ ಅಧ್ಯಕ್ಷ ಎಂ.ಮಹೇಶ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಓದಿನೊಂದಿಗೆ ಗುಣ, ನಡತೆ ರೂಪಿಸಿಕೊಳ್ಳಬೇಕು ಎಂದು ನೀಡಿದರು.

ಎಕ್ಸಲೆಂಟ್​ ಹೈಸ್ಕೂಲ್​ನ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕ ಸಂದೀಪ್​ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ವಂದಿಸಿದರು.

ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ. ಅದು ನಾವು ಆರಿಸಿಕೊಳ್ಳುವ ಗೆಳೆಯರಿಂದ ಬರುತ್ತದೆ. ಅದಕ್ಕಾಗಿ ವ್ಯಕ್ತಿ ಮತ್ತು ಗುಣ ನೋಡಿ ಗೆಳೆತನ ಮಾಡಬೇಕು. ವಿದ್ಯಾರ್ಜನೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು.| ನಾಗರಾಜ್​ ಶೆಟ್ಟಿ. ಪ್ರಾಂಶುಪಾಲ, ಎಕ್ಸಲೆಂಟ್​ ಕಾಲೇಜು, ಕುಂದಾಪುರ.