ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಅಭಿಶಿಕ್ಷಣ ಕಾರ್ಯಕ್ರಮವನ್ನು ನರೇಂದ್ರ ಎಸ್.ಗಂಗೊಳ್ಳಿ ಉದ್ಘಾಟಿಸಿದರು.  
ಜಿಲ್ಲೆ

ಪರಿಶ್ರಮ, ಬದ್ಧತೆಯಿಂದ ವ್ಯಕ್ತಿತ್ವ ಅಭಿವೃದ್ಧಿ

Karthika K.S

ಕುಂದಾಪುರ: ನಾವು ಸಣ್ಣಪುಟ್ಟ ಯಶಸ್ಸುಗಳನ್ನೇ ಸಾಧನೆ ಎಂದುಕೊಳ್ಳಬಾರದು. ನಮ್ಮ ಸಾಮರ್ಥ್ಯಗಳ ಜತೆ ನಾವೇ ಸ್ಪರ್ಧಿಸುತ್ತ ಸತತವಾಗಿ ನಮ್ಮ ಕೌಶಲ ವ್ಯಕ್ತಿತ್ವ ಅಭಿವೃದ್ಧಿಪಡಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ಮತ್ತು ಬದ್ಧತೆ ಹಾಕಬೇಕು ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಅಭಿಪ್ರಾಯಪಟ್ಟರು.

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಅಭಿಶಿಕ್ಷಣ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಸುನೀಲ್ ಪ್ಯಾಟ್ರಿಕ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಶುಭಹಾರೈಸಿದರು. ಶಿಕ್ಷಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.