ಜಿಲ್ಲೆ

ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ನಗರದ ಇಂಪಲ್ಸ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಹಾಗೂ ಮಾರ್ಗದರ್ಶನ ಶಿಬಿರ ಏರ್ಪಡಿಸಲಾಗಿತ್ತು.

ಅತಿಥಿಗಳಾಗಿದ್ದ ವಾಗ್ಮಿ, ಮೌಂಟ್ ಅಬುವಿನ ಡಾ. ಸುರೇಶಕುಮಾರ ಶರ್ಮಾ ಮಾತನಾಡಿ, ನಿರಂತರ ಅಭ್ಯಾಸ, ಸಮಯ ಪ್ರಜ್ಞೆ, ಸತತ ಪರಿಶ್ರಮ, ಸಕಾರಾತ್ಮಕ ಮನೋಭಾವ, ಸ್ಪಷ್ಟವಾದ ಗುರಿ ಹೊಂದಿದಾಗ ಮಾತ್ರ ನೀವು ಬಯಸಿದ ಯಶಸ್ಸು ನಿಮ್ಮದಾಗಲಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಅದರಿಂದ ಯಶಸ್ಸಿನ ಹಾದಿ ಸುಗಮವಾಗಲಿದೆ ಎಂದರು.

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಎಸ್.ಬಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸುಜಾತಾ ಎನ್.ಎಂ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.