ಜಿಲ್ಲೆ

ನದಿಗೆ ಹಾರಿದವನ ರಕ್ಷಣೆ

Mangaluru - Nishantha Narayana

ಕಡಬ: ಇಲ್ಲಿಗೆ ಸಮಿಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಗೆ ಹಾರಿದ ಬಳಿಕ ನದಿಯ ಮದ್ಯದ ಪೊದೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದು ಸಹಾಯಕ್ಕಾಗಿ ಕೂಗಾಡಿದ್ದು ಯುವಕನನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ಬಚಾವು ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರು ಮಾರ್ತಹಳ್ಳಿ ವಿಶ್ವನಾಥ ಎಂಬುವವರ ಪುತ್ರ ರವಿಕುಮಾರ್ (40)ನದಿಗೆ ಹಾರಿದ ವ್ಯಕ್ತಿ.


ನದಿಗೆ ಹಾರಿದ ಬಳಿಕ ಪೊದೆಯಲ್ಲಿ ಸಿಕ್ಕಿಹಾಕಿಕೊಂಡು ಕೂಗಡುತ್ತಿರುವ ಶಬ್ದ ನದಿ ತಟದ ಮನೆ ಮಂದಿಗೆ ಕೇಳಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳಿಯರು ಅಗ್ನಿಶಾಮಕ ದಳದ ಸಿಬ್ಬಂದಿಗಳು ,ಹಾಗು ಶೌರ್ಯ ತಂಡದದವರು ಕಾರ್ಯಚರಣೆ ನಡೆಸಿ ನದಿಯಿಂದ ಮೆಲಕೆತ್ತಿದ್ದಾರೆ. ಕಡಬ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪುಳಿಕುಕ್ಕು ಸೇತುವೆ ಬಳಿಯ ಬಸ್ ತಂಗುದಾಣದಲ್ಲಿ ಈತನದ್ದೆ ಎನ್ನಲಾದ ಬ್ಯಾಗ್ ಪತ್ತೆಯಾಗಿದೆ. ಈತ ಕಳೆದ ರಾತ್ರಿಯಿಂದ ಈ ಪರಿಸರದಲ್ಲಿ ಸುತ್ತಾಡುತ್ತಿದ್ದ ಎನ್ನಲಾಗಿದೆ.