ಜಿಲ್ಲೆ

ವ್ಯಕ್ತಿ ಮೇಲೆ ಕರಡಿಗಳ ದಾಳಿ

ಕನಕಗಿರಿ: ಶೌಚಕ್ಕೆ ತೆರಳಿದ್ದಾಗ ವ್ಯಕ್ತಿಯ ಮೇಲೆ ಮೂರು ಕರಡಿಗಳು ದಾಳಿ ಮಾಡಿದ ಘಟನೆ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೋಮಸಾಗರ ನಿವಾಸಿ ಹನುಮನಗೌಡ (30) ಅ.25ರಂದು ರಾತ್ರಿ 11 ಗಂಟೆ ಸುಮಾರಿಗೆ ಶೌಚಕ್ಕೆ ತೆರಳಿದ್ದು, ತಾಯಿ ಕರಡಿ ಸಹಿತ ಎರಡು ಮರಿ ಕರಡಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಇವುಗಳಿಂದ ತಪ್ಪಿಸಿಕೊಂಡು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಡಿಗಳು ಗ್ರಾಮದಲ್ಲಿ ಕಾಣಿಸಿಕೊಂಡಿದ್ದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ.