ಜಿಲ್ಲೆ

ಸಾಲದ ಆಸೆಗೆ ಬಿದ್ದು 1.21 ಲಕ್ಷ ರೂ. ಕಳೆದುಕೊಂಡ; ಅಪರಿಚಿತನ ಕರೆಗೆ ಮೋಸ ಹೋದ ಕಾರ್ಮಿಕ

ದಾವಣಗೆರೆ: ಸಾಲದ ಆಸೆಗೆ ಬಿದ್ದ ಕಾರ್ಮಿಕನೊಬ್ಬ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಸಾಲ ಕೊಡಿಸುವ ನೆಪದಲ್ಲಿ ದೆಹಲಿಯ ಫೈನಾನ್ಸ್ ಕಂಪನಿಯೊಂದರ ಹೆಸರು ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿ, ವಿನೋಬನಗರದ ಕಾರ್ಮಿಕನ ಖಾತೆಯಿಂದ 1,21,024 ರೂ. ಲಪಟಾಯಿಸಿದ ಪ್ರಕರಣ ಸಿಇಎನ್ ಅಪರಾಧ ಠಾಣೆಯಲ್ಲಿ ಶನಿವಾರ ದಾಖಲಾಗಿದೆ.

ದಾವಣಗೆರೆ ಟಾರ್ಪಲಿನ್‌ನಲ್ಲಿ ಕೆಲಸ ಮಾಡುತ್ತಿರುವ ಎ.ವಿ. ಮಹೇಂದ್ರರಾವ್ ಮೋಸ ಹೋದವರು. ಜು.19ರಂದು ಕರೆ ಮಾಡಿದ ಅಪರಿಚಿತನೊಬ್ಬ ಸಾಲ ಕೊಡಿಸುವ ನೆಪದಲ್ಲಿ ಎಲ್ಲ ದಾಖಲಾತಿ ಪಡೆದಿದ್ದಲ್ಲದೆ ಸುರಕ್ಷತಾ ಠೇವಣಿ ರೂಪದಲ್ಲಿ ಹಣ ಹಾಕುವಂತೆ ಹೇಳಿ ವಿವಿಧ ದಿನಾಂಕಗಳಂದು ಹಣ ಹಾಕಿಸಿಕೊಂಡಿದ್ದಾನೆ. ಅಲ್ಲದೆ ಬ್ಯಾಂಕ್ ಕಮಿಷನ್​ ಹಣ ನೀಡುವಂತೆ ಕೆಲವು ಕಾಲ ಪೀಡಿಸಿದ್ದ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.‘