ಜಿಲ್ಲೆ

ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವು

Haveri - Kariyappa Aralikatti

ಹಾನಗಲ್ಲ: ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಸರ್ಕಾರಿ ನೌಕರರ ಸಂಘದ ಬಳಿ ನಡೆದಿದೆ.

ಪಟ್ಟಣದ ಕುಂಬಾರ ಓಣಿಯ ಇರ್ಫಾನಅಹ್ಮದ್​ ಮೌಲಾಲಿ ಡೋಂಗ್ರಿ (32) ಮೃತ ವ್ಯಕ್ತಿ.

ಈತ ಕಟ್ಟಡದ ಮೇಲೆ ನಿಂತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.