ಜಿಲ್ಲೆ

ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು

ಮರಿದೇವ ಹೂಗಾರ

ಹುಬ್ಬಳ್ಳಿ: ಟಾಟಾ ಏಸ್ ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಇಲ್ಲಿಯ ಕೆಎಂಸಿಆರ್‌ಐನಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ಟಾಟಾ ಏಸ್ ಚಾಲಕ, ಹೊಸಪೇಟೆಯ ಬುಕ್ಕಸಾಗರದ ನಿವಾಸಿ ಸಮೀರ್ ಉದಗಟ್ಟಿ ಎಂಬಾತ ಟ್ರಾೃಕ್ಟರ್‌ನಲ್ಲಿದ್ದ ಉಮಚಗಿ ಗ್ರಾಮದ ಚಂದ್ರಯ್ಯ ಹುಬ್ಬಳ್ಳಿಮಠ (70) ಎಂಬುವವರಿಗೆ ತಾಲೂಕಿನ ಶಿರಗುಪ್ಪಿ ಬಳಿ ಡಿಕ್ಕಿ ಮಾಡಿದ್ದರು. ಕೆಳಗಡೆ ಬಿದ್ದು ಗಾಯಗೊಂಡಿದ್ದ ಚಂದ್ರಯ್ಯ ಅವರನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.