ಜಿಲ್ಲೆ

ನಿರಂತರ ಅಧ್ಯಯನದಿಂದ ಸಾಧನೆ ಸುಲಭ

ಪ್ರಶಾಂತ ಹೂಗಾರ

ರಾಯಬಾಗ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿರಂತರ ಅಧ್ಯಯನ ಮಾಡಿದರೆ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಬಾಜೀರಾವ ಮಗದುಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಎ.ಕೆ.ಸಲಗರೆ ಹೇಳಿದರು.

ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಬಾಜೀರಾವ ಮಗದುಮ್ಮ ಪ್ರೌಢಶಾಲೆ ಪರೀಕ್ಷೆ ಕೇಂದ್ರ ವ್ಯಾಪ್ತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದಿಗ್ಗೆವಾಡಿ ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ಬಿ.ಚೌಗುಲೆ, ಸಂಪನ್ಮೂಲ ವ್ಯಕ್ತಿ ಡಿ.ಆರ್.ಭೆಂಡೆ, ಆರ್.ಬಿ.ಬಾಗಿಮನಿ, ಪಿ.ಎಸ್.ನಿಡೋಣಿ, ರೇವತಿ ಉಪ್ಪಿನ,

ಎನ್.ಪಿ.ಕೋಳಿ, ಯು.ಎ.ಮಗದುಮ್ಮ ಇತರರಿದ್ದರು.