ತಾವರಗೇರಾ ವಿಶ್ವೇಶ್ವರಯ್ಯ ಪಪೂ ಕಾಲೇಜಿನಲ್ಲಿ ಪಿಯು ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ನಡೆಯಿತು. ಪಿಎಸ್‌ಐ ನಾಗರಾಜ ಕೊಟಗಿ, ಯೋಧ ಖಾಸಿಮ್ ಸಾಬ ಬಿಸ್ತಿ, ಚಂದ್ರಶೇಖರ, ನರಹರಿಯಪ್ಪ, ದೇವೇಂದ್ರ ಗೌಡ ಇದ್ದರು. 
ಜಿಲ್ಲೆ

ಸತತ ಪರಿಶ್ರಮದಿಂದ ಅಭ್ಯಾಸ ನಡೆಸಿ

Kopala - Desk - Eraveni

ತಾವರಗೇರಾ: ಇಲ್ಲಿಯ ವಿಶ್ವೇಶ್ವರಯ್ಯ ಪ.ಪೂ. ಕಾಲೇಜಿನಲ್ಲಿ ಬುಧವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಠಾಣೆ ಪಿಎಸ್‌ಐ ನಾಗರಾಜ್ ಕೋಟಗಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿನಿತ್ಯ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಹಳೇ ವಿದ್ಯಾರ್ಥಿ ಅಸ್ಸಾಮ್ ಗಡಿ ಪ್ರದೇಶದಲ್ಲಿ ಸೈನಿಕನಾಗಿ ಕೆಲಸ ನಿರ್ವಹಿಸುತ್ತಿರುವ ಖಾಸೀಂಸಾಬ್ ಬಿಸ್ತಿ ವಿದ್ಯಾರ್ಥಿಗಳಿಗೆ ಸೇನಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.