ನೆಲಮಂಗಲ : ಅತಿವೇಗವಾಗಿ ಬೆಳೆಯುತ್ತಿರುವ ನೆಲಮಂಗಲದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಗರದಲ್ಲಿ ವರ್ಷಗಳ ಹಿಂದೆಯೇ ನಿರ್ಮಾಣಗೊಂಡು ನೆನೆಗುದಿಗೆ ಬಿದ್ದಿದ್ದ ಜಲಸಂಗ್ರಹಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು. ನಗರಸಭೆ ವ್ಯಾಪ್ತಿಯ ಗಜಾರಿಯ ಬಡಾವಣೆ ಹಾಗೂ ದಾದಪೀರ್ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಪಿಡಬ್ಲು$್ಯಎಸ್ಎಸ್ಬಿ)ನಿಂದ ಜಲ ಸಂಗ್ರಹಾಲಯ ನಿರ್ಮಾಣ ಪೈಪ್ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೆಲಹಂತದ ಜಲಸಂಗ್ರಹಾರ ಮತ್ತು ಭೂ ಮೇಲ್ಮಟ್ಟದ ಜಲ ಸಂಗ್ರಹಗಾರಗಳನ್ನು ಸದ್ಬಳಕೆ ಮಾಡಿಕೊಂಡು ಕೆಲ ವಾರ್ಡ್ಗಳಲ್ಲಿನ ನೀರಿನ ಸಮಸ್ಯೆ ತಗ್ಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ನಗರಸಭೆ ಅಧ್ಯಕ್ಷ ಎನ್.ಗಣೇಶ್ ಮಾತನಾಡಿ, ನೀರು ಲಭ್ಯವಿರುವ ಪ್ರದೇಶದಲ್ಲಿ ಕೊಳವೆ ಬಾವಿಕೊರೆಸಿ ನೀರು ತಂದು ನೀರು ಇಲ್ಲದ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಕೆರೆ, ಪಾರ್ಕ್ ಅಭಿವೃದ್ಧಿ: ನಗರಸಭೆ ವ್ಯಾಪ್ತಿಯಲ್ಲಿ ಕಸಮುಕ್ತ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಸ ಮುಕ್ತ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಜತೆಗೆ ಪಾರ್ಕ್ ಹಾಗೂ ನಗರದ ಎರಡು ಕೆರೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾಗಿದ್ದು, ಶ್ರೀ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಶ್ರೀನಿವಾಸ್ ಹೇಳಿದರು. ಪಿಡಬ್ಲು$್ಯಎಸ್ಎಸ್ಬಿನಿಂದ 1.50 ಕೋಟಿ ವೆಚ್ಚದಲ್ಲಿ ಜಲ ಸಂಗ್ರಹಾಲಯ ನಿರ್ಮಾಣ ಪೈಪ್ ಲೈನ್ ಕಾಮಗಾರಿ ಸೇರಿ 1.50 ಕೋಟಿ ರೂ. ವೆಚ್ಚದಲ್ಲಿ ವಿನಾಯಕ ಬಡಾವಣೆ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಸ, ರಸ್ತೆ ಹಾಗೂ ಒಳ ಚರಂಡಿ ಸಮಸ್ಯೆಗೆ ಮುಕ್ತಿ ನೀಡುವಂತೆ ಸ್ಥಳಿಯರು ಶಾಸಕರಿಗೆ ಮನವಿ ಸಲ್ಲಿಸಿದರು.
ಪೌರಾಯುಕ್ತ ಗಂಗಾಧರ್, ನೆ.ಯೋ.ಪ್ರಾಧಿಕಾರ ಸದಸ್ಯ ಬಿ.ಜಿ.ವಾಸು, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಮುಖಂಡ ಎಂ.ಕೆ.ನಾಗರಾಜು, ಕೆ.ಕೃಷ್ಣಪ್ಪ, ಸಿ.ಎಂ.ಗೌಡ, ಮನುಗೌಡ, ಕೆಂಪರಾಜು, ಹನುಮಂತರಾಜು, ಕೆ.ವಸಂತ್, ಲ್ಮನಾರಾಯಣ್, ಕೆಂಪರಾಜು, ಮುನಿರಾಜು, ರವಿಕುಮಾರ್, ವಿಜಯ್ಕುಮಾರ್, ನರೇಂದ್ರ, ಮಂಜುನಾಥ್, ವೆಂಕಟೇಶ್ ಇದ್ದರು.
ಮಾಜಿ ಶಾಸಕರ ವಿರುದ್ಧ ಆಕ್ರೋಶ : ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿಗೆ ಚುನಾವಣೆಯಲ್ಲಿ ೇತ್ರದ ಜನ ಪಾಠ ಕಲಿಸಿದ್ದರೂ ಎಚ್ಚೆತ್ತುಕೊಂಡಿಲ್ಲ. ಎರಡನೇ ಬಾರಿ ಪಾಠ ಕಲಿಸುವ ಮುನ್ನ ಎಚ್ಚರಗೊಳ್ಳಬೇಕು. ಅವರಿಗೆ ಹಂತ ಹಂತವಾಗಿ ಉತ್ತರ ನೀಡಲಾಗುವುದು. ಮಾಜಿ ಶಾಸಕರ ಗೃಹ ಕಚೇರಿಯ ರಸ್ತೆಯನ್ನೇ ಅಭಿವೃದ್ಧಿ ಮಾಡಿಕೊಳ್ಳದವರು ೇತ್ರಕ್ಕೆ ಏನು ಮಾಡಲು ಸಾಧ್ಯ ಎಂದು ಶಾಸಕ ಎನ್.ಶ್ರೀನಿವಾಸ್ ವ್ಯಂಗ್ಯವಾಡಿದರು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರ ಗೃಹ ಕಚೇರಿ ರಸ್ತೆಯ ಅಭಿವೃದ್ಧಿಗೆ ಕಾಮಗಾರಿಗೆ ಸಾರ್ವಜನಿಕರ ಮನವಿ ಮೇರೆಗೆ ನವರಾತ್ರಿಯಲ್ಲಿ ಭೂಮಿ ಪೂಜೆ ಮಾಡಲಾಗುವುದು. 2 ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಆಡಿಯೋ ಬಿಡುಗಡೆ ಶ್ರೀಘ್ರ : ಇತ್ತೀಚೆಗೆ ಮಾಗಡಿ ಮಾಜಿ ಶಾಸಕ ಮಂಜುನಾಥ್ ಅವರು ನನ್ನ ಮೇಲೆ ಕೆಲ ಆರೋಪ ಮಾಡಿದ್ದಾರೆ. ಅದರ ವಿರುದ್ಧ ಕಾನೂನು ಮೊರೆ ಹೋಗಿದ್ದೇನೆ. ಅವರು ಅವರದೇ ಕ್ಷೇತ್ರದ ಮತದಾನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಇದ್ದು, ಶ್ರೀ ಬಿಡುಗಡೆ ಮಾಡುವುದಾಗಿ ಶಾಸಕ ಶ್ರೀನಿವಾಸ್ ತಿಳಿಸಿದರು.
ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ : ನಗರದ ಜನತೆಗೆ ಯುಜಿಡಿ ಜತೆಗೆ ಕಾವೇರಿ ಕುಡಿಯುವ ನೀರು ಪೂರೈಕೆ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ಕಾವೇರಿ 6 ಹಂತದ ಯೋಜನೆಯಲ್ಲಿ ನೆಲಮಂಗಲಕ್ಕೆ 43 ಎಂಎಲ್ಡಿ ನೀರನ್ನು ಮೀಸಲಿಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಿಂದ ನಗರಕ್ಕೆ ಪೈಪ್ಲೈನ್ ಸೇರಿ ವಿವಿಧ ಕಾಮಗಾರಿಗೆ 300 ಕೋಟಿ ರೂ. ಸರ್ಕಾರ ನೀಡಿದ್ದು, ನಗರದಲ್ಲಿ ಕಡಿಯುವ ನೀರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಮಾಹಿತಿ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ನಿಂದ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಪರ್ಯಾಯವಾಗಿ ಅಭ್ಯರ್ಥಿ ತರಲು ಮಾಜಿ ಶಾಸಕರ ಬೆಂಬಲಿಗರೇ ಸಿದ್ಧರಾಗಿದ್ದಾರೆ. ಮೊದಲು ನಿಮ್ಮ ಬೆಂಬಲಿಗರನ್ನು ಭದ್ರ ಮಾಡಿಕೊಳ್ಳಿ. | ಎನ್.ಶ್ರೀನಿವಾಸ್ ಶಾಸಕ