ಯಕ್ಷಗಾನ ವೇಷಧಾರಿಯಾಗಿ ಚಿತ್ರನಟ ರಮೇಶ್ ಅರವಿಂದ್ 
ಜಿಲ್ಲೆ

ಕವಿರತ್ನ ಕಾಳಿದಾಸ ಮತ್ತು ವೀರಬರ್ಭರಿಕ ಯಕ್ಷಗಾನ ಪ್ರದರ್ಶನ

ಜನಹಿತ ಸೇವಾ ಫೌಂಡೇಷನ್ ಶಿರಸಿ ಹಾಗೂ ಯಕ್ಷಾಭಿಮಾನಿ ಬಳಗ ಮೈಸೂರು ವತಿಯಿಂದ ಜೂನ್ 2 ರಂದು ಮ.2.30ಕ್ಕೆ ಕಲಾಮಂದಿರಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಕವಿರತ್ನ ಕಾಳಿದಾಸ ಮತ್ತು ವೀರಬರ್ಭರಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು(ಭಾಗವತರು), ಪರಮೇಶ್ವರ ಭಂಡಾರಿ ಕರ್ಕಿ, ಸುನೀಲ ಭಂಡಾರಿ ಕಡತೋಕ(ಮದ್ದಳೆ), ಶಿವಾನಂದ ಕೋಟ, ಸುಜನ ಹಾಲಾಡಿ(ಚಂಡೆ) ಸಾಥ್ ನೀಡಲಿದ್ದಾರೆ.