ಜಿಲ್ಲೆ

ಸಿಇಟಿಯಲ್ಲಿ ಹಂಚಿನಮನಿ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಧಾರವಾಡ: ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಕೆಸಿಇಟಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಮತ್ತು 36ಕ್ಕೂ ಹೆಚ್ಚು ವಿದ್ಯಾರ್ಥಿಗಳು 10,000ಕ್ಕಿಂತ ಕೆಳಗಿನ ಇಂಜಿನಿಯರಿAಗ್ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಾದ ರಘೋತ್ತಮ ನಾಡಗೌಡರ ಇಂಜಿನಿಯರಿAಗ್ 159ನೇ ರ‍್ಯಾಂಕ್, ಪ್ರಣವ ಮುಚ್ಚಕಣಿ ಇಂ- 746, ರೀತ್ ಪೋರವಾಲ್ ಇಂ- 823, ಮಂಜುನಾಥ ಶಿವನಗೌಡ್ರ ಇಂ- 932, ಪ್ರಮೋದ ಚೌಗಲೆ ಇಂ- 2023, ಸಂಜನಾ ಶಾನಭಾಗ್ ಇಂ- 2107, ಹರ್ಷದ್ ಮುಗಳೊಳ್ಳಿ ಇಂ- 2441, ಅಕ್ಷಯ ದಫೇದಾರ ಇಂ- 2742, ಈರಣ್ಣ ಹೊಸಮನಿ ಅಗ್ರಿ- 1091, ಇಂ- 3005ನೇ ರ‍್ಯಾಂಕ್ ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಕಾರ್ಯದರ್ಶಿ ಮನೋಜ ಪಿ. ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಎಂ. ಹಂಚಿನಮನಿ, ಪ್ರಾಚಾರ್ಯ ರಾಜು ಕಡೆಮನಿ ಮತ್ತು ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.