ಬದಿಯಡ್ಕ: ದೇವರನ್ನು ನಂಬಿ ಬದುಕುವುದೇ ಧರ್ಮ. ಯುವ ಶಕ್ತಿಗಳು ದೇವಸ್ಥಾನಗಳಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದು, ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದರೆ ಪೂರ್ವಜನ್ಮದ ಪುಣ್ಯವಿರಬೇಕು. ದೇವರ ಕೆಲಸವನ್ನು ಮಾಡಿದರೆ ಪುಣ್ಯ ಸಂಪಾದಿಸಿದಂತೆ ಎಂದು ಕೊಡುಗೈ ದಾನಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಹೇಳಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಶ್ರೀ ಶಿವಶಕ್ತಿ ಪೆರಡಾಲ 32ನೇ ವಾರ್ಷಿಕೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ, ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಶುಭಾಶಂಸನೆಗೈದರು.
ಶಿವಶಕ್ತಿಯ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಕಾರ್ಯದರ್ಶಿ ಪುಟ್ಟನಾಯ್ಕ ಪೆರಡಾಲ, ಕೋಶಾಧಿಕಾರಿ ನವೀನ ಪಟ್ಟಾಜೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಉದಯಶಂಕರ ಭಟ್ ಪಟ್ಟಾಜೆ ಪ್ರಾರ್ಥಿಸಿದರು. ಗಣೇಶ್ ಪ್ರಸಾದ ಕಡಪ್ಪು ಸ್ವಾಗತಿಸಿದರು. ಡಾ.ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಾಸ್ಯೋತ್ಸವ, ಹಾಸ್ಯನಟ ಪೊಳ್ಳಾಚಿ ಮುತ್ತು ಸಾದರಪಡಿಸಿದ ಗಾನಮೇಳ ಜರಗಿತು.
ಸನ್ಮಾನ
ಕುಂಟಾರು ವಾಸುದೇವ ತಂತ್ರಿ, ಯೋಗೀಶ್ ಕಡಮಣ್ಣಾಯ ಆರಿಕ್ಕಾಡಿ, ಬ್ರಹ್ಮವಾಹಕ ಗೋಪಾಲಕೃಷ್ಣ ಅಡಿಗ ಕುಂಬಳೆ, ಶಿವರಾಮ ಭಟ್ ಶಾಂತಿಪಳ್ಳ, ವಿಷ್ಣು ಭಟ್ ವಿ.ಎಂ.ನಗರ ಬೇಳ, ಗಂಗಾಧರ ಮಾರಾರ್ ನೀಲೇಶ್ವರ, ನರಸಿಂಹ ಪುರುಷ ಬಾಂಜತ್ತಡ್ಕ, ಬಾಬು ಚೇನಕ್ಕೋಡು ಮಧೂರು, ಶ್ರೀಧರ ಚೆಟ್ಟಿಯಾರ್ ಶಾಂತಿಪಳ್ಳ, ರಾಜೇಶ್ವರಿ, ಜಯಂತಿ, ಕಮಲ, ರಮೇಶ್, ಲಕ್ಷ್ಮೀ ಬಾಬು, ಚಂದ್ರ, ವಿಶ್ವನಾಥ, ಗ್ರಾಮಪಂಚಾಯಿತಿ ವಾರ್ಡು ಸದಸ್ಯ ಶ್ಯಾಮಪ್ರಸಾದ ಮಾನ್ಯ ಇವರನ್ನು ಸನ್ಮಾನಿಸಲಾಯಿತು.