ಸಿಂಧನೂರಿನ ಬಾಲಕರ ಸರ್ಕಾರಿ ಪಪೂ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆಯುತ್ತಿರುವ ಸಿಬ್ಬಂದಿ. 
ಜಿಲ್ಲೆ

ಪ್ರತಿ ಕೇಂದ್ರಕ್ಕೆ ಇಬ್ಬರು ಪೊಲೀಸರ ಭದ್ರತೆ

Kopala - Desk - Eraveni

ಸಿಂಧನೂರು: ತಾಲೂಕಿನ ಒಟ್ಟು ಒಂಬತ್ತು ಪರೀಕ್ಷೆ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ 4,453 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

ಸರ್ಕಾರಿ ಜೂನಿಯರ್ ಕಾಲೇಜ್, ಆರ್‌ಜಿಎಂ ಕಾಲೇಜ್, ಕನಕದಾಸ ಕಾಲೇಜ್, ಶಂಕರ್‌ಟ್ರಸ್ಟ್ ಕಾಲೇಜ್, ಸಂಕೇತ ಕಾಲೇಜ್, ವಿಜಡಂ ಕಾಲೇಜ್, ಎವಿಎಸ್ ಕಾಲೇಜ್, ಎಕ್ಸಲೆಂಟ್ ಕಾಲೇಜ್ ಹಾಗೂ ಕೃಷ್ಣದೇವರಾಯ ಕಾಲೇಜ್‌ಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾ.1ರಂದು ಕನ್ನಡ ವಿಷಯ ಪರೀಕ್ಷೆಯನ್ನು 3804 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಯಾವುದೇ ರೀತಿ ನಕಲು ನಡೆಯದಂತೆ ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಮಾಡಿದ್ದು, ಬಂದೋಬಸ್ತ್‌ಗೆ ಪ್ರತಿ ಕೇಂದ್ರಕ್ಕೆ ಇಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ.