ಜಿಲ್ಲೆ

ಜವಾಹರ್ ನವೋದಯ ವಿದ್ಯಾಲಯ ಶಾಲೆಗೆ ಶೇ. 100 ರಷ್ಟು ಫಲಿತಾಂಶ

ಮೈಸೂರು:ಮೈಸೂರಿನ ಜವಾಹರ ನವೋದಯ ವಿದ್ಯಾಲಯದ 10 ಮತ್ತು 12 ನೆಯ ತರಗತಿಯ ಸಿಬಿಸಿಎಸ್ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶ ಎರಡೂ ತರಗತಿಗಳಲ್ಲೂ ಪ್ರತಿಶತ 100 ರಷ್ಟು ಫಲಿತಾಂಶ ಬಂದಿರುತ್ತದೆ.

10 ನೇ ತರಗತಿಯ ಫಲಿತಾಂಶ:

ಸಚಿನ್ ಬಿ.ಎಂ 98.20% ಪ್ರತಿಶತ ಅಂಕಗಳನ್ನು ಪಡೆದು ವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಮತ್ತು ನಾಗದೇವ್ ಪ್ರತಿಶತ 98.00% ಅಂಕ ಪಡೆದು ವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡು ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಶಾಲೆಯ 79 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದರ್ಜೆಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.