ಜಿಲ್ಲೆ

ಜನರ ತಲಾ ಆದಾಯ 3.40 ಲಕ್ಷ ರೂ.ಗೆ ಏರಿಕೆ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಕಳೆದ 3 ವರ್ಷದಲ್ಲಿ ರಾಜ್ಯದ ಜನರ ತಲಾ ಆದಾಯ 2.50 ಲಕ್ಷ ರೂ.ದಿಂದ 3.40 ಲಕ್ಷ ರೂ.ಗೆ ಹೆಚ್ಚಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 59 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾಡನ್ನು ಕಟ್ಟುವುದು ಗಂಭೀರ ವಿಚಾರ. ವಿಚಾರಗಳನ್ನು ಮೂಲಭೂತವಾಗಿ ಅರ್ಥಮಾಡಿಕೊಳ್ಳಬೇಕು.

ನಾವು ಜನರನ್ನು ಸ್ವಾವಲಂಬಿ ಮಾಡುವ ಯೋಜನೆಗಳನ್ನು ಕೊಡುತ್ತಿದ್ದೇವೆ. ಹಸಿದವನಿಗೆ ಮೀನು ಊಟ ಕೊಟ್ಟರೆ ಹಸಿವು ನೀಗುತ್ತದೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟಲ್ಲಿ ಆತ ಜೀವನ ಪೂರ್ತಿ ಊಟ ಮಾಡಬಹುದು ಎಂದರು.

ಅಧಿಕಾರದ ರಾಜಕಾರಣ ಮಾಡಿದವರನ್ನು ಜನ ಮರೆಯುತ್ತಾರೆ. ಆದರೆ, ಜನಪರ ರಾಜಕಾರಣ ಮಾಡಿದವರಿಗೆ ಅಧಿಕಾರವೂ ಬರುತ್ತದೆ. ಜನರ ಪ್ರೀತಿಯೂ ಲಭಿಸುತ್ತದೆ ಎಂದು ಹೇಳಿದರು.


ಹಿಂದೆ ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ಈಗ ದುಡಿಮೆಯೇ ದೊಡ್ಡಪ್ಪ. ದಿಡ್ಡಿದ್ದವರು ನಾಡಿಗೆ ಕೊಟ್ಟಿದ್ದು ವಿರಳ. ದುಡಿಯುವವ ನಾಡು ಬದಲಾಯಿಸುತ್ತಾನೆ. ಕಾರ್ವಿುಕರು ಬದಲಾವಣೆ ಮಾಡುತ್ತಿದ್ದಾರೆ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಗೋವಿಂದ ಕಾರಜೋಳ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ದಿನಕರ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ವಾಗತಿಸಿದರು.