ಜಿಲ್ಲೆ

ಕಾಳುಮೆಣಸು ಗುಣಮಟ್ಟ ಸುಧಾರಣೆಯಾಗಲಿ

ಎ. ಆರ್. ರಘುರಾಮ

ಶನಿವಾರಸಂತೆ: ಕಾಳುಮೆಣಸು ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು
ದೋಣಿಗಾಲ್ ಐ.ಸಿ.ಆರ್.ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ.ಕೆ.ಎನ್.ಹರ್ಷ ಹೇಳಿದರು. ಸಾಂಬಾರ ಮಂಡಳಿ ಹಾಗೂ ಕೊಡ್ಲಿಪೇಟೆ ಹೇಮಾವತಿ ರೋಟರಿ ಕ್ಲಬ್ ಮತ್ತು ಪ್ಲಾಂಟರ್ಸ್‌ ರಿಕ್ರಿಯೇಷನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕೊಡ್ಲಿಪೇಟೆ ಪ್ಲಾಂಟರ್ಸ್‌ ಕ್ಲಬ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾಳು ಮೆಣಸು ಬೆಳೆ, ಅದರ ನಿರ್ವಹಣೆ, ಗೊಬ್ಬರ, ಔಷಧ, ಮಳೆಯಾಧಾರಿತ ಮತ್ತು ನೀರಾವರಿ ಆಧಾರಿತವಾಗಿ ಮೆಣಸು ಬೆಳೆಯುವ ವಿಧಾನ, ಮಣ್ಣಿನ ಫಲವತ್ತತೆ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಸಕಲೇಶಪುರದ ಸಾಂಬಾರ ಮಂಡಳಿಯ ಹಿರಿಯ ಕ್ಷೇತ್ರಾಧಿಕಾರಿ ಕುಮಾರ್, ಯಸಳೂರು ಸಸ್ಯಪಾಲನಾ ಕೇಂದ್ರದ ವ್ಯವಸ್ಥಾಪಕ ರಮೇಶ್ ನಾಯಕ್, ಸಾಂಬಾರ ಮಂಡಳಿಯ ಉಪ ನಿರ್ದೇಶಕ ಎಂ.ವೈ.ಹೊನ್ನೂರು ಬೆಳೆಗಾರರಿಗೆ ತರಬೇತಿ ನೀಡಿದರು
ಕಾರ್ಯಗಾರವನ್ನು ಹೇಮಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಮೃತ್‌ಕುಮಾರ್ ಉದ್ಘಾಟಿಸಿದರು.
ಸೋಮವಾರಪೇಟೆ ಸಾಂಬಾರ ಮಂಡಳಿ ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕಲೇಶಪುರ ಸಾಂಬಾರ ಮಂಡಳಿಯ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಎಂ.ವೈ.ಹೊನ್ನೂರು, ಕೊಡ್ಲಿಪೇಟೆ ಪ್ಲಾಂಟರ್ಸ್‌ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್, ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಹನೀಫ್, ಬೆಸೂರು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ, ಕೊಡ್ಲಿಪೇಟೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಭಗವಾನ್ ಇತರರು ಇದ್ದರು.