ಜಿಲ್ಲೆ

24 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಖರೀದಿಸಿ ಹಣ ಕೊಡದೆ ಮೋಸ

Haveri - Kariyappa Aralikatti

ಬ್ಯಾಡಗಿ: ವ್ಯಾಪಾರಸ್ಥರಿಂದ ಖರೀದಿಸಿದ 24 ಲಕ್ಷ ರೂ. ಮೌಲ್ಯದ 100 ಕ್ವಿಂಟಾಲ್ ಮೆಣಸಿನಕಾಯಿ ಹಣ ಕೊಡದೆ ಮೋಸ ಮಾಡಿದ ಕುರಿತು ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ಮೆಣಸಿನಕಾಯಿ ವ್ಯಾಪಾರಿ ಜಿಶಾನಅಲಿ ಕಲ್ಮನಿ (26) ಮೋಸ ಹೋದವರು. ಪಟ್ಟಣದ ಸಲೀಂ ಬಾಬುಸಾಬ ಹೇರೂರ ಹಾಗೂ ಗುಜರಾತ ರಾಜ್ಯದ ಸೂರತ್ ಪಟ್ಟಣದ ಮೇಹುಲಕುಮಾರ ಮಹೇಂದ್ರಬಾಬು ಪಟೇಲ್ ಮೋಸ ಮಾಡಿದ ಆರೋಪಿಗಳು.
ಆರೋಪಿಗಳು ವ್ಯಾಪಾರಿಯಿಂದ ವಿವಿಧ ತಳಿಯ 24 ಲಕ್ಷ ರೂ. ಮೌಲ್ಯದ 100 ಕ್ವಿಂಟಾಲ್ ಮೆಣಸಿನಕಾಯಿ ಖರೀದಿಸಿದ್ದರು. ಆದರೆ, ಹಣ ಕೇಳಿದರೆ ಇಂದು ನಾಳೆ ಎನ್ನುತ್ತ ಸತಾಯಿಸುತ್ತ ಕಾಲ ದೂಡುತ್ತಿದ್ದಾರೆ. ಇದೀಗ ಹಣ ಸಹ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.