ಜಿಲ್ಲೆ

ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟಕ್ಕೆ ಜನರ ಬೆಂಬಲ ಅಗತ್ಯ;ಈರಾ.ದುರ್ಗಪ್ರಸಾದ್

reportermys

ಮಡಿಕೇರಿ: ಕೆ.ಎಸ್.ಆರ್.ಟಿ.ಸಿ ನೌಕರರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಜನತೆ ಒತ್ತಡ ಹೇರಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಕಾರ್ಯದರ್ಶಿ ಈರಾ.ದುರ್ಗಪ್ರಸಾದ್ ಮನವಿ ಮಾಡಿದರು.

ಅಂದಿನ ಸಾರಿಗೆ ಇಲಾಖೆಯ ಉಪ ಮುಖ್ಯಮಂತ್ರಿ ಲಕ್ಷ್ಮಣ ಸಂ.ಸವದಿಯವರ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ, ಕೋವಿಡ್-೧೯ ಸೋಂಕು ತಗಲಿದ ನಿಗಮದ ನೌಕರರು ಮರಣಹೊಂದಿದ ಸಂದರ್ಭದಲ್ಲಿ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ ರೂ೩೦ ಲಕ್ಷ ಪರಿಹಾರ ಸೇರಿದಂತೆ ವಿವಿಧ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಯಾವುದು ಅನುಷ್ಠಾನಕ್ಕೆ ತರಲಿಲ್ಲ. ಆದ್ದರಿಂದ ನೌಕರರ ಹೋರಾಟ ನ್ಯಾಯಸಮ್ಮತ್ತವಾಗಿದ್ದು, ರಾಜ್ಯದ ಜನತೆ ಬೆಂಬಲ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮಡಿಕೇರಿ ಡಿಪ್ಪೋದಲ್ಲಿ ಅಧಿಕಾರದಲ್ಲಿರುವವರು ಖಾಸಗೀಕರಣ ಪ್ರಕ್ರಿಯೆಯನ್ನು ತಮ್ಮದೇ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಈ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ವೈ.ಕೆ.ಗಣೇಶ್, ಶಿವಪ್ಪ ಇದ್ದರು.