ಹೊಸನಗರ ತಾಲೂಕು ಕಚ್ಚಿಗೆಬೈಲ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಸಮಾರೋಪದಲ್ಲಿ ಎಚ್.ಆರ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ದೀಪಿಕಾ ಕೃಷ್ಣ, ಶಂಕರ ಶೆಟ್ಟಿ, ಎಚ್.ಸುಧಾ, ಕೆ.ಎನ್.ಮಂಜುನಾಥ್, ಎಚ್.ಬಿ.ಚಿದಂಬರ್ ಇತರರಿದ್ದರು. 
ಜಿಲ್ಲೆ

ಜನರ ಪಾಲ್ಗೊಳ್ಳವಿಕೆ ಅಗತ್ಯ

ಹೊಸನಗರ: ಊರಿನ ಜನರ ಪಾಲ್ಗೊಳ್ಳುವಿಕೆ ಮತ್ತು ಆಸಕ್ತಿಯ ಮೇಲೆಯೇ ಶಾಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧೀಕಾರಿ ಎಚ್.ಆರ್.ಕೃಷ್ಣಮೂರ್ತಿ ಹೇಳಿದರು. ಕಚ್ಚಿಗೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಾರುತಿಪುರ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶಾಲೆಯ ಕಾರ್ಯಕ್ರಮವೂ ಸೇರಿದಂತೆ ಆಗುಹೋಗುಗಳಲ್ಲಿ ಪಾಲಕರು ಪಾಲ್ಗೊಳ್ಳುವುದು ಹೆಚ್ಚಾದರೆ ಮತ್ತು ಊರ ಪ್ರಮುಖರು ಜವಾಬ್ದಾರಿವಹಿಸಿದರೆ ಶಾಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ ಎಂದರು. ಕಾರ್ಯಕ್ರಮವನ್ನು ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಕೃಷ್ಣ ಉದ್ಘಾಟಿಸಿದರು. ಉಪಾಧ್ಯಕ್ಷ ಶಂಕರ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್.ಬಿ.ಚಿದಂಬರ್, ಸದಸ್ಯರಾದ ಜಿ.ಎಂ.ಪ್ರಕಾಶ್, ಸುಮಾ ಸುರೇಶ್, ಗಣೇಶ್ ದೇವರಾಜ್, ಜಯಮ್ಮ, ನಿವೃತ್ತ ಸೈನಿಕ ಕೆ.ಪಿ.ಕೃಷ್ಣಮೂರ್ತಿ, ಇಸಿಒ ಕರಿಬಸಪ್ಪ, ಸಿಆರ್‌ಪಿ ರಾಮದಾಸ್ ನಾಯ್ಕ, ಮುಖ್ಯಶಿಕ್ಷಕಿ ಎಚ್. ಸುಧಾ, ಸಮಿತಿಯ ನಾಗರತ್ನಾ ಇದ್ದರು. ಶಾಲಾ ಸಮಿತಿ ಅಧ್ಯಕ್ಷ ಕೆ.ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.