ತ್ಯಾಮಗೊಂಡ್ಲು ಹೋಬಳಿ ಕೊಡಿಗೇಹಳ್ಳಿಯಲ್ಲಿ ಕೆಐಎಡಿಬಿ ಮತ್ತು ಕರ್ನಾಟಕ ಸರ್ಕಾರದ ಭೂ ಸ್ವಾಧಿನ ವಿರುದ್ಧ ರೈತರು ಜಾಥ ನಡೆಸಿದರು.ಗ್ರಾಮ ಪಂಚಾಯಿತಿ ಸದಸ್ಯೆ ಯಶೋದಾ ರಮೇಶ್​, ಹರೀಶ್​, ಗ್ರಾಪಂ ಮಾಜಿ ಸದಸ್ಯ ದೇವರಾಜ್​, ರಮೇಶ್​, ಗಂಗಹನುಮಯ್ಯ, ಕುಮಾರ್​. ಎಚ್​.ಎನ್​.ಬೈರೇಗೌಡ, ಕೃಷ್ಣಮೂರ್ತಿ, ಅಶ್ವತ್ಥನಾರಾಯಣ್​, ಹನುಮಂತರಾಜು, ರಾಮಣ್ಣ, ನಾರಾಯಣಗೌಡ, ಹರೀಶ್​ ಶ್ರೀಕಂಠಾಚಾರ್​, ಗಂಗರಾಜು, ವೆಂಕಟಪ್ಪ ಇದ್ದರು. 
ಜಿಲ್ಲೆ

ಭೂಸ್ವಾಧಿನದ ವಿರುದ್ಧ 3 ಗ್ರಾಮದಲ್ಲಿ ಜನಾಂದೋಲನ

ತ್ಯಾಮಗೊಂಡ್ಲು : ಇಡೀ ದೇಶದಲ್ಲಿ ಸ್ವಾತಂತ್ರ$್ಯದ ಸಂಭ್ರಮವಿದೆ, ಆದರೆ ನೆಲಮಂಗಲ ತಾಲೂಕಿನ ಕೊಡಿಗೇಹಳ್ಳಿ, ಬಳ್ಳಗೆರೆ ಮತ್ತು ಕೆಂಚನಪುರದಲ್ಲಿ ಬಡ ರೈತರು ಕೃಷಿ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಕೊಡಿಗೆಹಳ್ಳಿ ಗ್ರಾಪಂ ಸದಸ್ಯ ನರಸಿಂಹಮೂರ್ತಿ ಅಸಮಾಧಾನ ಹೊರಹಾಕಿದರು.

ನೆಲಮಂಗಲ ತಾಲೂಕಿನ ಕೊಡಿಗೆಹಳ್ಳಿಯ ಲಕ್ಷ$್ಮಣಸ್ವಾಮಿ ಆಶ್ರಮದಲ್ಲಿ ಕೊಡಿಗೇಹಳ್ಳಿ, ಬಳ್ಳಗೆರೆ ಮತ್ತು ಕೆಂಚನಪುರ ರೈತರು ಶುಕ್ರವಾರ ಆಯೋಜಿಸಿದ್ದ ಕೆಐಎಡಿಬಿ ಮತ್ತು ಕರ್ನಾಟಕ ಸರ್ಕಾರದ ಭೂ ಸ್ವಾಧಿನ ವಿರೋಧಿ ಜನಾಂದೋಲನದಲ್ಲಿ ಮಾತನಾಡಿದರು. ಈ ಮೂರೂ ಗ್ರಾಮಗಳಲ್ಲಿ ಉತ್ತಮ ಕೃಷಿ ಭೂಮಿ ಇದೆ. ಗ್ರಾಮಸಭೆಯಲ್ಲಿ ರೈತರೊಂದಿಗೆ ಅಧಿಕಾರಿಗಳು ಚರ್ಚೆ,ಸಮಾಲೋಚನೆ ನಡೆಸದೆ ಭೂ ಸ್ವಾಧಿನ ಮಾಡುವುದರಿಂದ ಸರ್ಕಾರ ಜನರ ಹಕ್ಕನ್ನು ಕಸಿದುಕೊಂಡಂತಾಗಿದೆ. ನಮ್ಮ ಕುಟುಂಬಗಳ ಹಿರಿಯರ ಸಮಾಧಿ ಇವೆ, ನಮ್ಮ ಭಾವನೆಗಳ ಜತೆ ಸರ್ಕಾರ ಆಟವಾಡಿದರೆ ಸುಮ್ಮನಿರಲಾಗದು ಎಂದರು.

ಪ್ರಗತಿಪರ ರೈತ ಬಳ್ಳಗೆರೆ ರುದ್ರೇಶ್​ ಮಾತನಾಡಿ, ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ಮೂರೂ ಗ್ರಾಮಗಳ ಸುತ್ತುವರಿದು ಕಾಡಿದೆ, ಪ್ರಾಣಿ ಪಗಳಿವೆ, ಕೆರೆ&ಕುಂಟೆಗಳಿವೆ, ಅರಣ್ಯ ಭೂಮಿ ಇದ್ದು, ಈ ಭಾಗದಲ್ಲಿ ಕೈಗಾರಿಕ ಪ್ರದೇಶ ಅಭಿವೃದ್ದಿಯಾದರೆ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ, ಆಹಾರ ಸಿಗದಿದ್ದರೆ ಕಾಡು ಪ್ರಾಣಿಗಳು ಸಾಯುವ ಪರಿಸ್ಥಿತಿ ಬರಲಿದೆ. ಸರ್ಕಾರ ಒಂದು ಕಡೆ ಕಾಡು, ಕಾಡುಪ್ರಾಣಿಗಳನ್ನು ರಸಿ ಎಂದು ಹೇಳಿ ಇನ್ನೊಂದು ಕಡೆ ಕಾಡನ್ನು ನುಂಗುತ್ತಿದೆ ಎಂದರು, ಗ್ರಾಮ ಪಂಚಾಯತಿ ಈಗ ಗ್ರಾಮ ಸರ್ಕಾರ ಎಂದು ಬದಲಾಗಿದೆ. ಗ್ರಾಪಂ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲಿ ಇಲಾಖೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಗ್ರಾಮ ಸಭೆಯಲ್ಲಿ ಚರ್ಚೆಯಾಗಬೇಕು, ಕೆಎಐಡಿಬಿ ಕೂಡ ಹೊರತಾಗಬಾರದು, ಗ್ರಾಮಸಭೆಯನ್ನು ಬಲಗೊಳಿಸಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧಿನದ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನ ರಾಜ್ಯದ ಉಳಿದ ಪ್ರದೇಶಗಳಿಗೂ ಅನ್ವಯವಾಗಲಿ ಎಂದು ರೈತರೂ ಆದ ವಿಜ್ಞಾನಿ ಡಾ.ಜಿ.ಬೈರೇಗೌಡ ಸರ್ಕಾರಕ್ಕೆ ಮನವಿ ಮಾಡಿದರು. ದರ ನಿಗದಿಪಡಿಸುವುದಕ್ಕೆ ಕೆಐಎಡಿಬಿ ಕರೆದಿರುವ ಸಭೆ ಬಹಿಷ್ಕರಿಸುತ್ತೇವೆ ಎಂದು ಸಭೆಯಲ್ಲಿದ್ದ ಎಲ್ಲ ಗ್ರಾಮಸ್ಥರು ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಂಡರು.