ಹುಕ್ಕೇರಿ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಶಾಸಕ ಉಮೇಶ ಕತ್ತಿ ಅವರನ್ನು ಪುರಸಭೆ ನೂತನ ಅಧ್ಯಕ್ಷ ಎ.ಕೆ.ಪಾಟೀಲ ಮತ್ತು ಉಪಾಧ್ಯಕ್ಷ ಆನಂದ ಗಂಧ ಸನ್ಮಾನಿಸಿದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಪರಗೌಡ ಪಾಟೀಲ, ಕೆ.ಬಿ.ಪಾಟೀಲ, ಜಯಗೌಡ ಪಾಟೀಲ, ರೋಹಿತ ಚೌಗಲಾ ಮತ್ತಿತರರಿದ್ದರು. 
ಜಿಲ್ಲೆ

ಜನಪರ ಕಾರ್ಯಕ್ಕೆ ಸದಾ ಸಹಕಾರ

Belagavi

ಹುಕ್ಕೇರಿ: ಪುರಸಭೆ ಸದಸ್ಯರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಶ್ರಮಿಸಬೇಕು. ಕೈಗೊಳ್ಳುವ ಎಲ್ಲ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ಯಾವತ್ತೂ ಸಹಕಾರ ನೀಡುವುದಾಗಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, 24್ಡ7 ಕುಡಿಯುವ ನೀರಿನ ಸರಬರಾಜು ವ್ಯವಸ್ಥಿತವಾಗಿ ನಡೆಯುತ್ತಿದೆ. ಶೀಘ್ರದಲ್ಲಿ ಒಳಚರಂಡಿ ಡ್ರೈನೇಜ್ ಕಾಮಗಾರಿಗೆ ಅನುದಾನ ಬರಲಿದೆ ಎಂದರು. ನೂತನ ಅಧ್ಯಕ್ಷ ಎ.ಕೆ.ಪಾಟೀಲ ಮಾತನಾಡಿ, ಶಾಸಕರ ಸಹಕಾರದಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು. ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಸದಾಶಿವ ಕರೆಪ್ಪಗೋಳ, ಚಂದ್ರು ಮುತ್ನಾಳೆ, ಮಹಾಂತೇಶ ತಳವಾರ, ಮಾಜಿ ಸಚಿವ ಶಶಿಕಾಂತ ನಾಯಿಕ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ಪಾಟೀಲ, ನಿರ್ದೇಶಕರಾದ ಜಯಗೌಡ ಪಾಟೀಲ, ರವೀಂದ್ರ ಹಿಡಕಲ್, ಜೈನ ಮಹಾಸಭಾ ನಿರ್ದೇಶಕ ರೋಹಿತ ಚೌಗಲಾ, ರಾಜೇಂದ್ರ ಬಡಿಗೇರ, ಗಿರೀಶ ಪಾಟೀಲ, ಕೆಂಪಣ್ಣ ದೇಸಾಯಿ ಮತ್ತಿತರಿದ್ದರು.