ಮುದಗಲ್: ಕನ್ನಡ ಭಾಷೆ, ನೆಲ, ಜಲದ ಕುರಿತು ಹೆಚ್ಚು ಪ್ರಚುರಪಡಿಸುವಲ್ಲಿ ಕಸಾಪ ಪಾತ್ರ ಮಹತ್ವದ್ದಾಗಿದೆ ಎಂದು ಪರಿಷತ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ ಹೇಳಿದರು.
ಇದನ್ನೂ ಓದಿ:ಕಸಾಪ ಸಂಸ್ಥಾಪನಾ ದಿನಾಚರಣೆ
ಎಸ್‌ವಿಎಂ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುದಗಲ್ ಘಟಕದಿಂದ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಕಸಾಪ ಸ್ಥಾಪನೆಗೊಂಡು 111 ವರ್ಷಗಳು ಗತಿಸಿದ್ದು, ಪರಿಷತ್ ಕನ್ನಡ ಸಾಹಿತ್ಯ ಪರವಾಗಿ ಹೆಚ್ಚು ಕಾರ್ಯನಿರ್ವಹಿಸಿದೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದು, ತಾಲೂಕಿನ ನಾಗರಿಕರ ಸಹಕಾರದಿಂದ ಸಾಹಿತ್ಯ ಪರಿಷತ್ ಯೋಜನೆಗಳು ಸಾಕಾರಗೊಂಡಿವೆ ಎಂದರು. ಕಸಾಪ ತಾಲೂಕು ಕಾರ್ಯದರ್ಶಿ ಸಂಗಮೇಶ ಸರಗಣಾಚಾರಿ, ಶಿಕ್ಷಕ ಆರ್.ಮೂಲಿಮನಿ, ಪ್ರಮುಖರಾದ ಮಾಸೂಮ್ ಷರೀಫ್, ವಾಹೀದ್ ಖುರೇಷಿ, ಸಣ್ಣ ಸಿದ್ದಯ್ಯ ಇತರರಿದ್ದರು.