ಸಂಕೇಶ್ವರ: ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ, ತಹಸೀಲ್ದಾರ್ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಹಿರಣ್ಯಕೇಶಿ ನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಕಾಳಜಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿ, ಇಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇನೆ ಎಂದರು. ನದಿ ಗಲ್ಲಿ, ಮಠ ಗಲ್ಲಿ, ಹಾಗೂ ಶಂಕರಲಿಂಗ ಕಾರ್ಯಾಲಯ, ಉರ್ದು ಶಾಲೆಯಲ್ಲಿ ಪ್ರಾರಂಭಿಸಿದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಹೊದಿಕೆ ನೀಡಿದರು.
ಡಾ.ಶಶಿಧರ ಮುನ್ಯಾಳ, ತಹಸೀಲ್ದಾರ್ ಮಂಜುಳಾ ನಾಯಿಕ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಉಪ ತಹಸೀಲ್ದಾರ್, ಸಿ.ಎ.ಪಾಟೀಲ, ಕಂದಾಯ ನಿರೀಕ್ಷಕ ಎ.ಎಂ.ಕಮತನೂರ, ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಶಿವಶರಣ ಅವಜಿ, ಅಭಿಯಂತ ರವೀಂದ್ರ ಗಡಾದ, ಗ್ರಾಮ ಲೆಕ್ಕಾಧಿಕಾರಿ ಎನ್.ಆರ್.ಪಾಟೀಲ ಇತರರು ಇದ್ದರು.